Advertisement

ಮಲ್ಪೆಯ ಹಲವು ಬೋಟ್‌ ಮಾಲಕರ ಮನೆಗೆ ದಿಲ್ಲಿ ಐಟಿ ದಾಳಿ

07:15 PM Feb 09, 2018 | Team Udayavani |

ಮಲ್ಪೆ : ಆದಾಯ ತೆರಿಗೆ ಇಲಾಖಾಧಿಕಾರಿಗಳು ನಿನ್ನೆ ಗುರುವಾರ ಮತ್ತು ಇಂದು ಶುಕ್ರವಾರ ಇಲ್ಲಿನ ಕೆಲವು ಮೀನುಗಾರಿಕಾ ಬೋಟ್‌ ಮಾಲಕರ ನಿವಾಸಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

Advertisement

ಐಟಿ ಅದಿಕಾರಿಗಳು ಕೆಲವೊಂದು ಬೋಟ್‌ ಮಾಲಕರ ಮನೆ ಮತ್ತು ಕಚೇರಿಗಳಿಗೆ ಕೂಡ ದಾಳಿ ಮಾಡಿ ದಾಖಲೆ ಪತ್ರಗಳನ್ನು ಪರಿಶೀಲಿಸಿರುವುದಾಗಿ ವರದಿಗಳು ತಿಳಿಸಿವೆ. 

ಪೂರ್ವ ಮಾಹಿತಿಯನ್ನು ಆಧರಿಸಿಕೊಂಡು ದಿಲ್ಲಿಯಿಂದ ಬಂದಿದ್ದ ಐಟಿ ಇಲಾಖಾಧಿಕಾರಿಗಳು ಈ ದಾಳಿ ನಡೆಸಿರುವರೆಂದು ತಿಳಿದು ಬಂದಿದೆ.

ಐಟಿ ಇಲಾಖಾಧಿಕಾರಿಗಳು ಆನಂದ ಕುಂದರ್‌, ಹರಿಯಪ್ಪ ಕೋಟಿಯಾನ್‌, ಸಾಧು ಸಾಲಿಯಾನ್‌, ಆನಂದ ಸುವರ್ಣ ಮೊದಲಾದ ಪ್ರಮುಖ ಬೋಟ್‌ ಮಾಲಕರ ನಿವಾಸ ಹಾಗೂ ಕಚೇರಿಗಳನ್ನು ಶೋಧಿಸಿರುವುದಾಗಿ ವರದಿಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next