ಹೊಸದಿಲ್ಲಿ : ಹೆರಾಲ್ಡ್ ಹೌಸ್ ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಒಕ್ಕಲೆಬ್ಬಿಸುವಿಕೆಯನ್ನು ದಿಲ್ಲಿ ಹೈಕೋರ್ಟ್ ಎತ್ತಿ ಹಿಡಿದಿದೆ. ಆದರೆ ಎಜೆಎಲ್ ಒಕ್ಕಲೆಬ್ಬಿಸುವಿಕೆಯನ್ನು ಯಾವಾಗ ನಡೆಸಬೇಕು ಎಂಬುದನ್ನು ಹೈಕೋರ್ಟ್ ಸ್ಪಷ್ಟಪಡಿಸಿಲ್ಲ.
ಹೆರಾಲ್ಡ್ ಹೌಸ್ ನಲ್ಲಿ ಯಾವುದೇ ಮುದ್ರಣ, ಪ್ರಕಾಶನ ಚಟುವಟಿಕೆಗಳು ನಡೆಯುತ್ತಿಲ್ಲ; ಕಟ್ಟಡವನ್ನು ಕೇವಲ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಆದುದರಿಂದ ಎಜೆಎಲ್ ಕಂಪೆನಿ, ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹೇಳಿ ಕೇಂದ್ರ ಸರಕಾರ, 56 ವರ್ಷಗಳಷ್ಟು ಹಳೆಯ ಲೀಸನ್ನು ಕೊನೆಗೊಳಿಸಿತ್ತು.
1962ರ ಆಗಸ್ಟ್ 2ರಂದು ಎಜೆಎಲ್, ಎಲ್ ಆ್ಯಂಡ್ ಡಿ ಓ ಜತೆಗೆ ಲೀಸ್ ಒಪ್ಪಂದ ನಡೆಸಿತ್ತು ಮತ್ತು 1967ರ ಜನವರಿ 10ರಂದು ಅದನ್ನು ಶಾಶ್ವತಗೊಳಿಸಿತ್ತು. ಆದರೆ 2018ರ ನವೆಂಬರ್ 15ರಂದು ಕಟ್ಟಡವನ್ನು ತನಗೆ ಹಸ್ತಾಂತರಿಸುವಂತೆ ಕಂಪೆನಿಯನ್ನು ಕೋರಿತ್ತು.