ನವ ದೆಹಲಿ : ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ದೇಶದಲ್ಲಿ ದಿನವೊಂದಕ್ಕೆ ಲಕ್ಷಾಂತರ ಮಂದಿ ಸೊಂಖ=ಕಿಗೆ ಒಳಗಾಗುತ್ತಿದ್ದಾರೆ. ಮಾತ್ರವಲ್ಲದೇ, ಸಾವಿಗೂ ಬಲಿಯಾಗುತ್ತಿದ್ದಾರೆ.
ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ತಂದೆ ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ (ಮೇ 2) ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಕೊನೆಗೂ ನನಸಾಯಿತು ‘ಮೇಷ್ಟ್ರು’ ಕನಸು : ಇಂದು ಶರಣು ಸಲಗರ ಶಾಸಕ
“ರಾಜ್ಯದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಇಂದು ತಮ್ಮ ತಂದೆಯನ್ನು ಗೆ ಕಳೆದುಕೊಂಡಿದ್ದಾರೆ. ಇದು ದುಃಖದ ಸಂಗತಿ. ಸತ್ಯೇಂದ್ರ ಅವರೇ, ನೀವು ದೆಹಲಿಯ ಜನರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಮನಸ್ಸನ್ನು ಹಗುರಗೊಳಿಸಲಿ, ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಳೆದ ಇಪ್ಪತ್ತ ನಾಲ್ಕು ಗಂಟೆಯ ಅವಧಿಯಲ್ಲಿ ದೆಹಲಿಯಲ್ಲಿ 412 ಮಂದಿ ಕೋವಿಡ ಸೋಂಕಿನಿಂದ ಮೃತರಾಗಿದ್ದು, ಇದರೊಂದಿಗೆ ದೆಹಲಿಯ ಒಟ್ಟಾರೆ ಸಾವಿನ ಸಂಖ್ಯೆ 16,559 ಕ್ಕೆ ಏರಿಕೆಯಾಗಿದೆ ಎಂದು ದೆಹಲಿಯ ಆರೋಗ್ಯ ಸಚಿವಾಲಯ ಹೊರಡಿಸಿದ ಬುಲೆಟಿನ್ ತಿಳಿಸಿದೆ.
ಇದನ್ನೂ ಓದಿ : ಕೋವಿಡ್ 19 ಕರ್ತವ್ಯ ನಿಭಾಯಿಸಲು ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ನೆರವು?