Advertisement

ED, CBI ಮೇಲ್ಮನವಿ: ರಾಜಾ, ಕನಿಮೋಳಿಗೆ ಹೈಕೋರ್ಟ್‌ ನೊಟೀಸ್‌

11:55 AM Mar 21, 2018 | Team Udayavani |

ಹೊಸದಿಲ್ಲಿ : 2ಜಿ ತರಂಗಾಂತರ ಹಂಚಿಕೆ ಹಗರದಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆಸಿದ ಆರೋಪದಿಂದ ಮಾಜಿ ಟೆಲಿಕಾಂ ಸಚಿವ ಎ ರಾಜಾ, ಡಿಎಂಕೆ ಸಂಸದೆ ಕಣಿಮೋಳಿ ಮತ್ತು ಇತರರು ಖುಲಾಸೆಗೊಂಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಮೇಲ್ಮನವಿ ಸಲ್ಲಿಸಿರುವ ಪ್ರಕಾರ ದಿಲ್ಲಿ ಹೈಕೋರ್ಟ್‌ ಆರೋಪಿಗಳಿಗೆ ನೊಟೀಸ್‌ ಜಾರಿ ಮಾಡಿದೆ. 

Advertisement

2ಜಿ ತರಂಗಾಂತರ ಹಂಚಿಕೆ ಹಗರಣಲ್ಲಿ  ಸಿಬಿಐ ವಿಶೇಷ ನ್ಯಾಯಾಲ ರಾಜಾ, ಕಣಿಮೋಳಿ ಮತ್ತು ಇತರರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ಅನುಸರಿಸಿ ನ್ಯಾಯಾಧೀಶ್‌ ಎಸ್‌ ಪಿ ಗರ್ಗ್‌ ಅವರು ಇನ್ನೊಂದು ನೊಟೀಸ್‌ ಜಾರಿ ಮಾಡಿದ್ದಾರೆ. 

ಹಣ ಅಕ್ರಮ ತಡೆ ಕಾಯಿದೆಯಡಿ ಜಾರಿ ನಿರ್ದೇಶನಾಲಯವು ಸ್ವಾಧೀನ ಪಡಿಸಿಕೊಂಡಿರುವ ಆರೋಪಿಗಳ ಸೊತ್ತುಗಳ ವಿಷಯದಲ್ಲಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next