Advertisement

Delhi ಗಟಾರವಾಗಿದೆ..ಎಚ್ಚೆತ್ತುಕೊಳ್ಳಿ ಜನರೇ : ಸಂಸದ ಗಂಭೀರ್

04:22 PM Jul 13, 2023 | Team Udayavani |

ಹೊಸದಿಲ್ಲಿ: ಐಟಿಒ ಮತ್ತು ಸಿವಿಲ್ ಲೈನ್‌ಗಳಂತಹ ಪ್ರದೇಶಗಳಿಗೆ ಗುರುವಾರ ಯಮುನಾ ನೀರು ನುಗ್ಗಿದ ಬಳಿಕ ‘ನಗರವು ಗಟಾರವಾಗಿ ಮಾರ್ಪಟ್ಟಿದೆ’ ಎಂದು ಹೇಳುವ ಮೂಲಕ ದೆಹಲಿ ಬಿಜೆಪಿ ಕೇಜ್ರಿವಾಲ್ ಸರಕಾರದ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ.

Advertisement

ಸಂಸದ ಗೌತಮ್ ಗಂಭೀರ್ ಆಪ್ ಸರ್ಕಾರದ ಉಚಿತ ವಿದ್ಯುತ್ ಮತ್ತು ನೀರು ಸರಬರಾಜು ಯೋಜನೆಗಳನ್ನು ಉಲ್ಲೇಖಿಸಿ, ”ಏನೂ ಉಚಿತ ಅಲ್ಲದ ಕಾರಣ ಎಚ್ಚರಗೊಳ್ಳಲು ಇದು ಸಕಾಲ” ಎಂದು ದೆಹಲಿಯ ಜನರನ್ನು ಕೇಳಿಕೊಂಡಿದ್ದಾರೆ. “ದೆಹಲಿಯ ಜನರೇ ಎದ್ದೇಳಿ. ದೆಹಲಿ ಗಟಾರವಾಗಿ ಮಾರ್ಪಟ್ಟಿದೆ. ಯಾವುದೂ ಉಚಿತವಾಗಿಲ್ಲ, ಇದಕ್ಕೆ ಬೆಲೆ ನೀಡಬೇಕು!!” ಎಂದು ಟ್ವೀಟ್ ಮಾಡಿದ್ದಾರೆ.

”ಅಭಿವೃದ್ಧಿ ಕಾಮಗಾರಿಗಳ ಹಣ ಪ್ರಚಾರಕ್ಕೆ ವ್ಯಯಿಸಿದ ಕಾರಣ ದೆಹಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ! ನಾನು ನಿರಂತರವಾಗಿ ಪರಿಹಾರ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ಪ್ರತಿದಿನವೂ ನಮ್ಮ ಜನ್ ರಸೋಯಿಯಿಂದ ಎಲ್ಲಾ ಸಂತ್ರಸ್ತರಿಗೆ ಆಹಾರವನ್ನು ತಲುಪಿಸಲಾಗುವುದು!” ಎಂದು ಸಂಸದ ಗಂಭೀರ್ ಟ್ವೀಟ್ ಮಾಡಿದ್ದಾರೆ.

ಪ್ರವಾಹ ಬಯಲು ಪ್ರದೇಶದಿಂದ ಸ್ಥಳಾಂತರಿಸಲ್ಪಟ್ಟ ಜನರ ಭೇಟಿ ಸಂದರ್ಭದಲ್ಲಿ ಬುಧವಾರ ಕೇಜ್ರಿವಾಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಗಂಭೀರ್, ಆಪ್ ಸರಕಾರ ಒಂಬತ್ತು ವರ್ಷಗಳಲ್ಲಿ ಕೇವಲ ಆರೋಪಗಳ ರಾಜಕಾರಣ ಹೊರತುಪಡಿಸಿ ಮೂಲಸೌಕರ್ಯಕ್ಕಾಗಿ ಒಂದು ಪೈಸೆ ಸಹ ಖರ್ಚು ಮಾಡಿಲ್ಲಕೇವಲ ಬಿಟ್ಟಿ ರಾಜಕೀಯ ಮಾಡಿ ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಆರೋಪಿಸಿದ್ದರು.

Advertisement

ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ ನದಿಗೆ ನೀರು ಬಿಡುತ್ತಿರುವುದರಿಂದ ಗುರುವಾರ ಮಧ್ಯಾಹ್ನ 1 ಗಂಟೆಗೆ ಯಮುನಾದಲ್ಲಿ ನೀರಿನ ಮಟ್ಟ 208.62 ಮೀಟರ್ ಆಗಿತ್ತು. ಪ್ರಸ್ತುತ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೂರು ಮೀಟರ್‌ಗಳಷ್ಟು ಹೆಚ್ಚಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ, ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಭಾನುವಾರದವರೆಗೆ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ತುರ್ತು ಸೇವೆಯಲ್ಲಿರುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next