Advertisement

ಕಾಮನ್ವೆಲ್ತ್‌ ಚಿನ್ನ ಗೆದ್ದ ಮಣಿಕಾಗೆ ದಿಲ್ಲಿ ಸರಕಾರದಿಂದ 14 ಲಕ್ಷ

04:35 PM Apr 10, 2018 | Team Udayavani |

ಹೊಸದಿಲ್ಲಿ : ಆಸ್ಟ್ರೇಲಿಯದಲ್ಲಿ ಸಾಗುತ್ತಿರುವ 2018ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟೇಬಲ್‌ ಟೆನಿಸ್‌ ಚಿನ್ನದ ಪದಕ ಗೆದ್ದ ದಿಲ್ಲಿ ಹುಡುಗಿ ಮಣಿಕಾ ಬಾತ್ರಾ ಅವರಿಗೆ ದಿಲ್ಲಿ ಸರಕಾರ 14 ಲಕ್ಷ ರೂ. ಇನಾಮು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಹೇಳಿದ್ದಾರೆ.

Advertisement

ಸರಕಾರದ ಕ್ರೀಡಾ ನೀತಿಯನ್ವಯ ಚಿನ್ನ  ಗೆದ್ದ ಮಣಿಕಾ ಬಾತ್ರಾಗೆ 14 ಲಕ್ಷ ರೂ. ಇನಾಮು ನೀಡಲಾಗುವುದು ಎಂದು ಸಿಸೋಡಿಯ ಅವರು ದಿಲ್ಲಿ ವಿಧಾನಸಭೆಯಲ್ಲಿ ಪ್ರಕಟಿಸಿದರು. 

ಸರಕಾರದ ಕ್ರೀಡಾ ನೀತಿ ಪ್ರಕಾರ ಸಿಡಬ್ಲ್ಯು ಜಿ ಚಿನ್ನ ಗೆದ್ದವರಿಗೆ 14 ಲಕ್ಷ, ಬೆಳ್ಳಿ ಗೆದ್ದವರಿಗೆ 10 ಲಕ್ಷ ಮತ್ತು ಕಂಚು ಗೆದ್ದವರಿಗೆ 6 ಲಕ್ಷ ರೂ. ಕೊಡುವ ಕ್ರಮವಿದೆ ಎಂದು ಸಿಸೋಡಿಯ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next