Advertisement
ಈ ಪ್ರಕರಣ ಮಂಗಳವಾರ ದಿನವಿಡೀ ವಿವಿಧ ರಾಜಕೀಯ ಪಕ್ಷಗಳ ನಾಯಕರ ಹಾಗೂ ದೆಹಲಿ ಸರ್ಕಾರದ ಐಎಎಸ್ ಅಧಿಕಾರಿಗಳ ಹೈ ಡ್ರಾಮಾಕ್ಕೆ ಕಾರಣವಾಯಿತು. ಶಾಸಕಾಂಗ ಹಾಗೂ ಕಾರ್ಯಾಂಗಗಳ ಈ ತಿಕ್ಕಾಟದಿಂದಾಗಿ ದೆಹಲಿ ಸರ್ಕಾರ ಒಂದು ದಿನದ ಮಟ್ಟಿಗೆ ಅನಧಿಕೃತವಾಗಿ ಸ್ಥಗಿತವಾಗಿ, ಅರಾಜಕತೆ ಉಂಟಾಯಿತು.
ಅನ್Ï ಪ್ರಕಾಶ್ ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸಿಎಂ ಕೇಜ್ರಿವಾಲ್ ಸೂಚನೆಯಂತೆ ಅವರು ಸಿಎಂ ನಿವಾಸದಲ್ಲಿ ನಡೆದ ಸಭೆಯೊಂದಕ್ಕೆ ತೆರಳಿದ್ದರು. ಸಭೆಯಲ್ಲಿ, ಸಿಎಂ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 11 ಮಂದಿ ಆಪ್ ಶಾಸಕರೂ ಇದ್ದರು. ಸಭೆಯಲ್ಲಿ, ಸರ್ಕಾರದ 3 ವರ್ಷಗಳ ಸಾಧನೆಯ ಜಾಹೀರಾತುಗಳನ್ನು ತಯಾರಿಸುವಂತೆ ಅನ್Ï ಮೇಲೆ ಒತ್ತಡ ಹೇರಲಾಯಿತು. ಈ ವೇಳೆ, ಮಧ್ಯಪ್ರವೇಶಿಸಿದ ಆಪ್ ಶಾಸಕರು, ಟಿವಿ ಕ್ಯಾಂಪೇನ್ ನಡೆಸಿ ಸರ್ಕಾರಕ್ಕೆ ಭರ್ಜರಿ ಪ್ರಚಾರ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಸೂಕ್ತವಾಗಿ ಅನ್Ï ಸ್ಪಂದಿಸಿಲ್ಲ. ತಮ್ಮ ಸಲಹೆಗಳಿಗೆ ಉತ್ತರಿಸುವಂತೆ ಶಾಸಕರು ಪಟ್ಟು ಹಿಡಿದಾಗ, ತಾವು ಲೆಫ್ಟಿrನೆಂಟ್ ಗವರ್ನರ್ ಅವರಿಗೆ ಮಾತ್ರ ಉತ್ತರದಾಯಿ. ಶಾಸಕರಿಗೆ ಹಾಗೂ ಸಿಎಂಗೆ ಅಲ್ಲ ಎಂದಿದ್ದು ಶಾಸಕರನ್ನು ಕೆರಳಿಸಿದೆ. ತಮ್ಮ ಆಗ್ರಹಗಳಿಗೆ ಒಪ್ಪಿಕೊಳ್ಳದಿದ್ದರೆ, ಸಿಎಂ ನಿವಾಸದಲ್ಲೇ ಕೊಠಡಿಯೊಂದರಲ್ಲಿ ರಾತ್ರಿಯಿಡೀ ಕೂಡಿ ಹಾಕುವ ಬೆದರಿಕೆ ಒಡ್ಡಲಾಯಿತು. ಅಲ್ಲದೆ, ಅನ್Ï ಅವರನ್ನು ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡಿದರೆಂಬ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆ ಹಾಕಲಾಯಿತು. ಇದರ ವಿರುದ್ಧ ಪ್ರತಿಭಟಿಸಿದ್ದಕ್ಕೆ ಶಾಸಕರು, ಅನ್Ï ಅವರನ್ನು ಥಳಿಸಿದರು. ಹಲ್ಲೆಯ ನಂತರ, ಸಿಎಂ ಮನೆಯಿಂದ ಹೊರನಡೆದ ಅನ್Ï ಪ್ರಕಾಶ್ ನೇರವಾಗಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮನೆಗೆ ತೆರಳಿ ಹಲ್ಲೆಯ ಬಗ್ಗೆ ದೂರು ನೀಡಿದರು.
Related Articles
Advertisement
ಎಫ್ಐಆರ್ ದಾಖಲು: ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಅನ್Ï ಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿರುವ ನಾಲ್ವರು ಆಪ್ ಶಾಸಕರ ವಿರುದ್ದ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಸಂಚು), 186 (ಸರ್ಕಾರಿ ಅಧಿಕಾರಿಯ ಸೇವೆಗೆ ಅಡ್ಡಿ) ಹಾಗೂ 353 (ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ) ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಕೇಂದ್ರ ಸರ್ಕಾರವನ್ನೂ ತಲುಪಿದ್ದು, ಪ್ರಕರಣದ ಸಮಗ್ರ ವರದಿ ನೀಡುವಂತೆ ಲೆಫ್ಟಿrನೆಂಟ್ ಗವರ್ನರ್‌ಗೆ ಸೂಚಿಸಿದೆ.
ರಾಜನಾಥ್ ಸಿಂಗ್ ಮೇಲೆ ಒತ್ತಡಸರ್ಕಾರದ ವಿರುದ್ಧ ಸಿಟ್ಟಿಗೆದ್ದಿರುವ ಐಎಎಸ್ ಅಧಿಕಾರಿಗಳ ತಂಡವೊಂದು ಮಂಗಳವಾರ ಸಂಜೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಅನ್Ï ಪ್ರಕಾಶ್ ಮೇಲೆ ಹಲ್ಲೆ ನಡೆಸಿದ ಆಪ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ, ದೆಹಲಿಯ ಲೆಫ್ಟಿrನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಈ ತಂಡ ದೂರು ನೀಡಿದೆ. “ನಗರೀಕೃತ ನಕ್ಸಲ್‌ತನ’
ಇಡೀ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಕೇನ್, ದೆಹಲಿ ಜನರ ಪ್ರತಿನಿಧಿಯಾಗಬೇಕಿರುವ ಆಪ್ ಸರ್ಕಾರ, “ನಗರೀಕೃತ ನಕ್ಸಲ್‌ತನ’ದ ಪ್ರತೀಕವಾಗಿದೆ. ಆಪ್‌ಗೆ ಸರ್ಕಾರ ನಡೆಸುವುದು ಹೇಗೆಂಬುದೇ ಗೊತ್ತಿಲ್ಲ. ಸಿಎಂ ಕೇಜ್ರಿವಾಲ್ ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದಿದ್ದಾರೆ. ಇನ್ನು, ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ದೆಹಲಿ ಸಿಎಂ ಹಾಗೂ ಅವರ ಕೆಲ ಗೂಂಡಾ ಶಾಸಕರು ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಘಟನೆಯ ನೈತಿಕ ಹೊಣೆ ಹೊತ್ತು ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಪಡಿತರ ತೊಂದರೆ ಸಮಸ್ಯೆ ಕುರಿತಂತೆ ಸಭೆ ಕರೆಯಲಾಗಿತ್ತು. ಸಿಎಂ ಪ್ರಶ್ನೆಗಳಿಗೆ ಮುಖ್ಯ ಕಾರ್ಯದರ್ಶಿ ಸೂಕ್ತ ಉತ್ತರ ನೀಡದೆ, ಶಾಸಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರ್ಯದರ್ಶಿ ವರ್ತನೆಯನ್ನು ಶಾಸಕರು ಖಂಡಿಸಿದರು. ಹಲ್ಲೆ ಮಾಡಿಲ್ಲ.
– ಆತಿಶಿ ಮಲೇìನಾ, ಆಪ್ ನಾಯಕಿ ಸರ್ಕಾರಿ ಅಧಿಕಾರಿಗಳು ನಿರ್ಭಯವಾಗಿ, ಸ್ವತಂತ್ರವಾಗಿ ಸೇವೆ ಸಲ್ಲಿಸುವಂಥ ವಾತಾವರಣ ಸೃಷ್ಟಿಯಾಗಬೇಕು. ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಕರಣದ ಬಗ್ಗೆ ಲೆ. ಗವರ್ನರ್‌ರಿಂದ ಮಾಹಿತಿ ಪಡೆಯಲಾಗಿದೆ. ನೊಂದವರಿಗೆ ಸೂಕ್ತ ನ್ಯಾಯ ದೊರಕಲಿದೆ.
– ರಾಜ್‌ನಾಥ್ ಸಿಂಗ್, ಕೇಂದ್ರ ಗೃಹ ಸಚಿವ