ನವದೆಹಲಿ: ಹೊಸ ವಾಹನ ಖರೀದಿಸಿದ ನಂತರ ಅದನ್ನು ಖುಷಿಯಿಂದ ರಸ್ತೆಗಿಳಿಸುತ್ತೇವೆ. ಆದರೆ ನವದೆಹಲಿಯಲ್ಲಿ ಇತ್ತೀಚೆಗೆ ಬೈಕ್, ಸ್ಕೂಟರ್ ಖರೀದಿಸುತ್ತಿರುವವರು ತಮ್ಮ ಗಾಡಿಯನ್ನು ರಸ್ತೆಗಿಳಿಸುವುದಕ್ಕೂ ನೂರು ಬಾರಿ ಯೋಚಿಸುತ್ತಿದ್ದಾರಂತೆ. ಅದಕ್ಕೆ ಕಾರಣ ನಂಬರ್ ಪ್ಲೇಟ್!
ದೆಹಲಿಯಲ್ಲಿ ಬೈಕ್‌ಗಳ ನೋಂದಣಿ ಮಾಡಿಕೊಳ್ಳುವಾಗ ಅದಕ್ಕೆ ಮೊದಲೆರೆಡು ಲೆಟರ್ ಅನ್ನು ರಾಜ್ಯ ಸೂಚಕವಾಗಿ “ಡಿಎಲ್’ ಎಂದು ನೀಡಲಾಗುತ್ತದೆ. ಮೂರನೆಯದಾಗಿ ಜಿಲ್ಲೆಯ ಸೂಚಕ ಸಂಖ್ಯೆ ನೀಡಲಾಗುತ್ತದೆ. ನಾಲ್ಕನೆಯದಾಗಿ ವಾಹನ ಸೂಚಕವಾಗಿ ಕಾರಿಗೆ ಸಿ, ಬೈಕಿಗೆ ಎಸ್ ಎಂದು ನೀಡಲಾಗುತ್ತದೆ.
5 ಮತ್ತು 6ನೇ ಸ್ಥಾನದಲ್ಲಿ ಸೀರಿಸ್‌ನಲ್ಲಿ ಲೆಟರ್‌ಗಳನ್ನು ನೀಡುತ್ತದೆ. ಕಳೆದ ವರ್ಷ ಈ ಸೀರಿಸ್ ಇಎಕ್ಸ್ ಎಂದಾಗಿತ್ತು. ಆ ಹಿನ್ನೆಲೆಯಲ್ಲಿ ಒಂದಿಷ್ಟು ಕಾಲ ದ್ವಿಚಕ್ರ ವಾಹನ ಖರೀದಿಸಿದವರೆಲ್ಲರಿಗೂ ಎಸ್‌ಇಎಕ್ಸ್(SEX) ಎಂದು ನಂಬರ್ ನೀಡಲಾಗಿದೆ.
ಇದನ್ನೂ ಓದಿ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಮುಷ್ಕರ
ಸೆಕ್ಸ್ ಎಂಬ ಈ ಪದ ನಂಬರ್ ಪ್ಲೇಟ್‌ನಲ್ಲಿರುವುದರಿಂದ ವಾಹನ ಮಾಲೀಕರಿಗೆ ಮುಜುಗರವಾಗುತ್ತಿದೆಯಂತೆ. ರಸ್ತೆ ಮೇಲೆ ಹೋಗುವಾಗ ನಂಬರ್ ಪ್ಲೇಟ್ ನೋಡಿದ ಜನರು, “ಸ್ವಲ್ಪವೂ ಮರ್ಯಾದೆ ಬೇಡವೇ?’ ಎಂದು ಬೈಯುತ್ತಿದ್ದಾರೆ. ಆದರೆ ಆರ್‌ಟಿಒದಲ್ಲಿ ನಂಬರ್ ಬದಲಾವಣೆಗೂ ಅವಶ್ಯಕತೆ ಇಲ್ಲ ಎನ್ನಲಾಗಿದ್ದು, ಅನೇಕರು ಬೈಕನ್ನು ಮನೆಯಲ್ಲೇ ನಿಲ್ಲಿಸಿ, ಸಾರ್ವಜನಿಕ ಸಾರಿಗೆಯಲ್ಲೇ ಸಂಚಾರ ಮುಂದುವರಿಸಿದ್ದಾರಂತೆ!