Advertisement
ಪರಿಷ್ಕರಣೆ ಆಗುತ್ತಾ?: ನೂತನ ಕೃಷಿ ಕಾಯ್ದೆಯ ಎಲ್ಲ ಅಂಶಗಳಿಗೆ ಸರಕಾರ ಬದ್ಧ ವಾಗಿದ್ದರೂ, ರೈತರಿಗೆ ಕಳವಳ ಹುಟ್ಟಿಸಿದಂಥ ಕೆಲವು ಅಂಶಗಳನ್ನು ಪರಿಷ್ಕರಿಸಬೇಕೇ ಎಂದು ಚರ್ಚಿಸಲು ಹಾಗೂ ರೈತರ ಆಕ್ರೋಶ ತಣ್ಣಗಾಗಿಸುವ ಸಂಬಂಧ ಬುಧ ವಾರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಈ ಮೇಲಿನ ಸಚಿವರು ಸಭೆ ನಡೆಸಿದ್ದರು. ಗುರುವಾರದ ಮಾತುಕತೆಯಲ್ಲಿ ಸರಕಾರ ಯಾವ ನಿಲುವು ತಾಳಬೇಕು ಎಂಬುದರ ಕುರಿತೂ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
Related Articles
Advertisement
ಇವನಲ್ಲಿ, ಅವಳಿಲ್ಲಿ… ಮದುವೆ ಎಲ್ಲಿ?ಆತ ದಿಲ್ಲಿಯಲ್ಲಿದ್ದಾನೆ. ಈಕೆ ಪಂಜಾಬ್‌ನಲ್ಲಿದ್ದಾಳೆ. ಡಿಸೆಂಬರ್ 6ಕ್ಕೆ ಪಂಜಾಬ್‌ನ ಭಾಟಿಂಡಾದಲ್ಲಿ ಮದುವೆ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆದಿದೆ. ಆದರೆ, ವರನಿಗೆ ವಿವಾಹ ಮಂಟಪವನ್ನು ಮುಂಚಿತವಾಗಿ ಸೇರಲು ಹಾದಿಗಳೇ ಸಿಗುತ್ತಿಲ್ಲ! ರೈತರ “ದಿಲ್ಲಿ ಚಲೋ’ ಎಫೆಕ್ಟ್ ಇದು. ರಾಜಧಾನಿಯ ಪ್ರಮುಖ ಗಡಿರಸ್ತೆಗಳು ಬಂದ್ ಆಗಿರುವ ಕಾರಣ, 300 ಕಿ.ಮೀ.ನ ಗುರಿ ಮುಟ್ಟಲೂ, ದಿಲ್ಲಿಯ ರಜೌರಿ ಗಾರ್ಡನ್‌ನಲ್ಲಿರುವ ವರನ ಕಡೆಯವರಿಗೆ ಸಾಧ್ಯವಾಗುತ್ತಿಲ್ಲ. “ದಿಲ್ಲಿಯಿಂದ ಬುಧವಾರ ಹೊರಡಲು ಯೋಜಿಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಅಲ್ಲದೆ, ಪಂಜಾಬ್ ಸರಕಾರ ರಾತ್ರಿ ಕರ್ಫ್ಯೂ ಜಾರಿಮಾಡಿರುವುದು ಮತ್ತಷ್ಟು ತೊಡಕಾಗಿದೆ’ ಎಂದು ವರನ ಕಡೆಯ ವರು ಗೋಳಿಡುತ್ತಿದ್ದಾರೆ. ದಿಲ್ಲಿ ಸಮೀಪದ ಶಿಂಘೂ ಗಡಿಯಲ್ಲಿ ರೈತರಿಂದ ಬುಧವಾರ ಪ್ರತಿಭಟನೆ.