Advertisement

Delhi Excise Policy Case: 5 ಕೋಟಿ ಲಂಚ ಪಡೆದ ಇ.ಡಿ ಅಧಿಕಾರಿ ಸಿಬಿಐ ಬಲೆಗೆ

09:46 AM Aug 29, 2023 | Team Udayavani |

ಹೊಸದಿಲ್ಲಿ: ದಿಲ್ಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ ಸುಮಾರು ಐದು ಕೋಟಿ ರೂ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಯನ್ನು ಸಿಬಿಐ ಸೋಮವಾರ ಬಂಧಿಸಿದೆ.

Advertisement

ಅಬಕಾರಿ ನೀತಿ ಪ್ರಕರಣದ ಆರೋಪಿ ಅಮನ್‌ದೀಪ್ ಸಿಂಗ್ ಧಲ್ ಅವರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಇ.ಡಿ ಸಹಾಯಕ ನಿರ್ದೇಶಕ ಪವನ್ ಖತ್ರಿ ಎಂಬ ಅಧಿಕಾರಿಯನ್ನು ಬಂಧಿಸಲಾಗಿದೆ.

ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಪವನ್ ಖತ್ರಿ ಮತ್ತು ಕ್ಲರ್ಕ್ ನಿತೇಶ್ ಕೊಹರ್ ವಿರುದ್ದ ಸಿಬಿಐ ಎಫ್ಐಆರ್ ದಾಖಲಿಸಿದೆ. ಏರ್ ಇಂಡಿಯಾ ಉದ್ಯೋಗಿ ದೀಪಕ್ ಸಾಂಗ್ವಾನ್, ಬಂಧಿತ ಉದ್ಯಮಿ ಅಮನ್‌ದೀಪ್ ಸಿಂಗ್ ಧಲ್, ಗುರುಗ್ರಾಮ್ ನಿವಾಸಿ ಬಿರೇಂದರ್ ಪಾಲ್ ಸಿಂಗ್, ಚಾರ್ಟರ್ಡ್ ಅಕೌಂಟೆಂಟ್ ಪ್ರವೀಣ್ ಕುಮಾರ್ ವಾಟ್ಸ್, ಕ್ಲಾರಿಡ್ಜಸ್ ಹೊಟೇಲ್‌ ನ ಸಿಇಒ ವಿಕ್ರಮಾದಿತ್ಯ ಮತ್ತು ಇತರ ಕೆಲವು ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಅಬಕಾರಿ ಪ್ರಕರಣದ ತನಿಖೆಯಲ್ಲಿ ತಮಗೆ ಸಹಾಯ ಮಾಡುವಂತೆ ಅಮನ್‌ದೀಪ್ ಸಿಂಗ್ ಧಲ್ ಮತ್ತು ದೀಪಕ್ ಸಂಗ್ವಾನ್ ಅವರು 2022ರ ಡಿಸಂಬರ್ ಮತ್ತು ಜನವರಿ 2023ರ ನಡುವೆ ಪ್ರವೀಣ್ ವಾಟ್ಸ್ ಅವರಿಗೆ ಐದು ಕೋಟಿ ರೂ ನೀಡಿದ್ದರು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:Birds ರಾಜ್ಯದ ಪಕ್ಷಿ ಪ್ರಭೇದಕ್ಕೆ ಕುತ್ತು: ಹಕ್ಕಿಗಳ ಸ್ಥಿತಿಗತಿ ವರದಿಯಲ್ಲಿ ಆತಂಕ

Advertisement

ಇ.ಡಿಗೆ ನೀಡಿದ ಹೇಳಿಕೆಯಲ್ಲಿ, ಪ್ರವೀಣ್ ವತ್ಸ್ ಅವರು ಕೆಲವು ಹಣದ ಬದಲಾಗಿ ಅಮನ್ ದೀಪ್ ಧಲ್ ಅವರನ್ನು ಬಂಧಿಸದಂತೆ ರಕ್ಷಿಸಲು ಸಹಾಯ ಮಾಡುವುದಾಗಿ ದೀಪಕ್ ಸಾಂಗ್ವಾನ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಸಂಗ್ವಾನ್ ಡಿಸೆಂಬರ್ 2022 ರಲ್ಲಿ ಇಡಿ ಅಧಿಕಾರಿ ಪವನ್ ಖಾತ್ರಿಗೆ ವ್ಯಾಟ್ಸ್ ಅನ್ನು ಪರಿಚಯಿಸಿದ್ದರು.

ಅಮನ್‌ದೀಪ್ ಸಿಂಗ್ ನಿಂದ ಪಡೆದ ಹಣದಿಂದ 50 ಲಕ್ಷ ರೂ ವನ್ನು ದೀಪಕ್ ಸಂಗ್ವಾನ್ ಮತ್ತು ಪವನ್ ಖತ್ರಿ ಅವರಿಗೆ ಅಡ್ವಾನ್ಸ್ ರೂಪದಲ್ಲಿ ನೀಡಿದ್ದೆ. ನಗದು ರೂಪದಲ್ಲಿ 2022ರ ಡಿಸೆಂಬರ್ ನಲ್ಲಿ ಹೋಟೆಲ್ ಐಟಿಸಿ ವಸಂತ್ ವಿಹಾರ್ ನ ಪಾರ್ಕಿಂಗ್ ಪ್ರದೇಶದಲ್ಲಿ ನೀಡಲಾಗಿತ್ತು ಎಂದು ಪ್ರವೀಣ್ ವಾಟ್ಸ್ ಇಡಿ ಮುಂದೆ ಹೇಳಿಕೆ ನೀಡಿದ್ದರು.

ಹಣ ನೀಡಿದ ಬಳಿಕವೂ ಅಂದರೆ 2023ರ ಮಾರ್ಚ್ 1ರಂದು ಇಡಿ ಅಧಿಕಾರಿಗಳು ಅಮನ್‌ದೀಪ್ ಸಿಂಗ್ ನನ್ನು ಪ್ರಕರಣದಲ್ಲಿ ಬಂಧಿಸಿದ್ದರು. ಈ ವೇಳೆ ದೀಪಕ್ ಸಾಂಗ್ವಾನ್ ಅವರನ್ನು ಭೇಟಿಯಾದ ಪ್ರವೀಣ್ ವತ್ಸ್, ಬಂಧನದ ಸೂಚನೆಗಳು ಉನ್ನತ ಅಧಿಕಾರಿಗಳಿಂದ ಬಂದವು. ಅವರ ಮೇಲೆ ತಮ್ಮ ಪ್ರಭಾವ ನಡೆಯುವುದಿಲ್ಲ ಎಂದು ಹೇಳಿದ್ದರು.

ಇದಾದ ಬಳಿಕ ಇ.ಡಿ ಅಧಿಕಾರಿಗಳೇ ಲಂಚ ಪಡೆದಿರುವ ಮಾಹಿತಿ ಉನ್ನತ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಇದರ ತನಿಖೆ ನಡೆಸಿ ಪ್ರವೀಣ್ ಮನೆಯಿಂದ 2.19 ಕೋಟಿ ನಗದು, 1.94 ಕೋಟಿ ಬೆಲೆಯ ಚಿನ್ನ ಮತ್ತು ಬ್ಯಾಂಕ್ ಖಾತೆಯಿಂದ 2.62 ಹಣವನ್ನು ಜಪ್ತಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next