Advertisement
ನಜಾಫ್ಗಢ ಶಾಸಕರಾಗಿರುವ ಸಾರಿಗೆ ಸಚಿವ ಕೈಲಾಶ್, ದಿಲ್ಲಿಯ ಇ.ಡಿ. ಕಚೇರಿಗೆ ಶನಿವಾರ ಹಾಜರಾದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೈಲಾಶ್ ಹೇಳಿಕೆಯನ್ನು ಇ.ಡಿ. ದಾಖಲಿಸಿಕೊಂಡಿದೆ. ಜತೆಗೆ ಹಗರಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ. ಅಬಕಾರಿ ನೀತಿಯನ್ನು ರೂಪಿಸಿದ ಸಚಿವರ ಸಮೂಹದಲ್ಲಿ ಕೈಲಾಶ್ ಕೂಡ ಇದ್ದರು.
ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಸರಕಾರಿ ಸಾಕ್ಷಿ ಯಾಗಿ ಬದಲಾಗಿರುವ ರಾಘವ್ ಮುಗುಂತಾ ರೆಡ್ಡಿ ಅವರ ತಂದೆ, 4 ಬಾರಿ ಸಂಸದ ಶ್ರೀನಿವಾಸಲು ರೆಡ್ಡಿಗೆ ಟಿಡಿಪಿ ಟಿಕೆಟ್ ನೀಡಿದೆ. “ಬಿಜೆಪಿ ಜತೆ ರೆಡ್ಡಿ ನಂಟು ಹೊಂದಿದ್ದಾರೆಂದು ನಾವು ಮೊದಲೇ ಹೇಳಿದ್ದೆವು. ಬಂಧನ ಬಳಿಕ ಆತ ಬಿಜೆಪಿಗೆ ದೇಣಿಗೆ ನೀಡಿದ್ದಾನೆ. ಶ್ರೀನಿವಾಸಲು ಟಿಡಿಪಿಯಿಂದ ಕಣ ಕ್ಕಿಳಿದಿದ್ದಾರೆ’ ಎಂದು ಆಪ್ ಹೇಳಿದೆ.