Advertisement

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

12:36 AM Nov 23, 2024 | Team Udayavani |

ಹೊಸದಿಲ್ಲಿ: ಫೆಬ್ರವರಿಯಲ್ಲಿ ನಡೆಯಲಿರುವ ದಿಲ್ಲಿ ಚುನಾವಣೆಗಾಗಿ ಆಪ್‌ ಕರ್ನಾಟಕದ ಗೃಹಲಕ್ಷ್ಮೀ ಮಾದರಿಯಲ್ಲಿ ಪ್ರತೀ ತಿಂಗಳು ಮಹಿಳೆಯರಿಗೆ 1,000ರೂ. ನೀಡುವ ಯೋಜನೆ ಸೇರಿ 7 ಉಚಿ ತ ಯೋಜನೆ ಘೋಷಿಸಿದೆ.

Advertisement

ಉಚಿತ ವಿದ್ಯುತ್‌, ನೀರು, ಶಿಕ್ಷಣ, ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಉಚಿತ ಚಿಕಿತ್ಸೆ, ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, ಹಿರಿಯ ನಾಗರಿಕರಿಗೆ ತೀರ್ಥಯಾತ್ರೆ ಎಂಬ ಹಾಲಿ ಯೋಜನೆಗಳನ್ನು ಮುಂದುವರಿಸುವ ಬಗ್ಗೆ ಮಾಜಿ ಸಿಎಂ ಕೇಜ್ರಿವಾಲ್‌ ಪ್ರಕಟಿಸಿದ್ದಾರೆ.

ಜತೆಗೆ, “ರೇವಡಿ ಪರ್‌ ಚರ್ಚಾ’ ಅಭಿಯಾನಕ್ಕೆ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ. ಅದ ರಂತೆ ಉಚಿತ ಯೋಜನೆ (ರೇವಡಿ)ಗಳ ಬಗ್ಗೆ ಆಪ್‌ನ ಸದಸ್ಯರು 65,000 ಸಭೆಗಳನ್ನು ನಡೆಸಿ ಮತದಾರರಿಗೆ ಅರಿವು ಮೂಡಿಸಲಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next