Advertisement

ದೆಹಲಿ ಫಲಿತಾಂಶ 2020: ಹಿಂದುಳಿದ ವರ್ಗದ ಎಲ್ಲಾ 12 ಮೀಸಲು ಕ್ಷೇತ್ರದಲ್ಲಿ ಆಪ್ ಜಯಭೇರಿ

09:44 AM Feb 12, 2020 | Nagendra Trasi |

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯಭೇರಿ ಗಳಿಸುವ ಮೂಲಕ ಮೂರನೇ ಬಾರಿ ದೆಹಲಿ ಗದ್ದುಗೆಗೆ ಏರಿದೆ. ಏತನ್ಮಧ್ಯೆ ದೆಹಲಿ ವಿಧಾನಸಭಾ ಕ್ಷೇತ್ರದ ಎಲ್ಲಾ 12 ಹಿಂದುಳಿದ ವರ್ಗಗಳ ಮೀಸಲು ಕ್ಷೇತ್ರಗಳಲ್ಲಿಯೂ ಗೆಲುವಿನ ನಗು ಬೀರಿದೆ.

Advertisement

ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೂ ಹಾಗೂ ಪ್ರತಿಪಕ್ಷಗಳಿಗೆ ಚುನಾವಣೆಯಲ್ಲಿ ದಲಿತರ ಮತಗಳು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಶೇ.12ರಷ್ಟು ದಲಿತ ಮತದಾರರಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ 12 ದಲಿತ ಮೀಸಲು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದೆ ಎಂದು ವರದಿ ತಿಳಿಸಿದೆ.

1)ಬವಾನಾ ಕ್ಷೇತ್ರದಲ್ಲಿ ಬಿಜೆಪಿಯ ರವೀಂದರ್ ಕುಮಾರ್ ವಿರುದ್ಧ ಆಪ್ ನ ಜೈ ಭಗವಾನ್ ಗೆ ಗೆಲುವು

2)ಸುಲ್ತಾನ್ ಪುರ್ ಮಾಜ್ರಾ ಕ್ಷೇತ್ರದಲ್ಲಿ ಬಿಜೆಪಿಯ ರಾಮ್ ಚಂದರ್ ಚಾವಾರಿಯಾ ವಿರುದ್ಧ ಆಪ್ ನ ಮುಖೇಶ್ ಅಹ್ಲಾವತ್ ಗೆ ಜಯ.

3)ಮಂಗೋಲ್ ಪುರಿ ಕ್ಷೇತ್ರದಲ್ಲಿ ಬಿಜೆಪಿಯ ಕರಾಂ ಸಿಂಗ್ ವಿರುದ್ಧ ಆಪ್ ನ ರಾಖಿ ಬಿರ್ಲಾಗೆ ಗೆಲುವು

Advertisement

4)ಕರೋಲ್ ಬಾಗ್ ಕ್ಷೇತ್ರದಲ್ಲಿ ಬಿಜೆಪಿಯ ಯೋಗೇಂದರ್ ಚಾಂಡೋಲಿಯಾ ವಿರುದ್ಧ ಆಪ್ ನ ರವಿಗೆ ಜಯ.

5)ಪಟೇಲ್ ನಗರ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರವೇಶ್ ರತನ್ ವಿರುದ್ಧ ಆಪ್ ನ ರಾಜ್ ಕುಮಾರ್ ಆನಂದ್ ಗೆ ಗೆಲುವು.

6)ಮಾದಿಪುರ್ ಕ್ಷೇತ್ರದಲ್ಲಿ ಬಿಜೆಪಿಯ ಕೈಲಾಶ್ ಸಾಕ್ಲಾ ವಿರುದ್ಧ ಆಪ್ ನ ಗಿರೀಶ್ ಸೋನಿಗೆ ಜಯ

7)ದಿಯೋಲಿ ಕ್ಷೇತ್ರದಲ್ಲಿ ಬಿಜೆಪಿಯ ಅರವಿಂದ್ ಕುಮಾರ್ ವಿರುದ್ಧ ಪ್ರಕಾಶ್ ಜಾರ್ವಾಲ್ ಗೆ ಗೆಲುವು

8)ಅಂಬೇಡ್ಕರ್ ನಗರ್ ಕ್ಷೇತ್ರದಲ್ಲಿ ಬಿಜೆಪಿಯ ಖುಷಿರಾಮ್ ಚುನಾರ್ ವಿರುದ್ಧ ಆಪ್ ನ ಅಜಯ್ ದತ್ ಗೆ ಜಯ

9)ತ್ರಿಲೋಕ್ ಪುರಿ ಕ್ಷೇತ್ರದಲ್ಲಿ ಬಿಜೆಪಿಯ ಕಿರಣ್ ವಿರುದ್ಧ ಆಪ್ ನ ರೋಹಿತ್ ಕುಮಾರ್ ಗೆ ಗೆಲುವು

10) ಕೋಂಡ್ಲಿ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ ಕುಮಾರ್ ವಿರುದ್ಧ ಆಪ್ ನ ಕುಲ್ ದೀಪ್ ಕುಮಾರ್ ಗೆ ಜಯ

11)ಸೀಮಾಪುರಿ ಕ್ಷೇತ್ರದಲ್ಲಿ ಎಲ್ ಜೆಪಿಯ ಸಂತ್ ಲಾಲ್ ವಿರುದ್ಧ ಆಪ್ ನ ರಾಜೇಂದ್ರ ಪಾಲ್ ಗೌತಮ್ ಗೆ ಗೆಲುವು

12)ಗೋಕಲ್ ಪುರ್ ಕ್ಷೇತ್ರದಲ್ಲಿ ಬಿಜೆಪಿಯ ರಂಜೀತ್ ಸಿಂಗ್ ವಿರುದ್ಧ ಆಪ್ ನ ಸುರೇಂದ್ರ ಕುಮಾರ್ ಗೆ ಜಯ.

Advertisement

Udayavani is now on Telegram. Click here to join our channel and stay updated with the latest news.

Next