Advertisement

ರೋಹಿತ್‌ಗೆ ಕುಟುಕಿದ ಪಂತ್‌

09:45 AM Mar 26, 2019 | Team Udayavani |

ಮುಂಬೈ: ರಿಷಭ್‌ ಪಂತ್‌ ಬಿರುಗಾಳಿ ಬ್ಯಾಟಿಂಗ್‌ ನಿಂದಾಗಿ ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 37 ರನ್‌ ಗೆಲುವು ದಾಖಲಿಸಿ ಐಪಿಎಲ್‌ 12ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

Advertisement

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ತಂಡವು ಮುಂಬೈಗೆ 20 ಓವರ್‌ಗೆ 214 ರನ್‌ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಮುಂಬೈಗೆ ರೋಹಿತ್‌ ಶರ್ಮ (14 ರನ್‌), ಕ್ವಿಂಟನ್‌ ಡಿ ಕಾಕ್‌ (27 ರನ್‌), ಸೂರ್ಯಕುಮಾರ್‌ ಯಾದವ್‌ (2 ರನ್‌), ಕೈರನ್‌ ಪೊಲಾರ್ಡ್‌ (21 ರನ್‌) ವಿಫ‌ಲರಾದರು. ಕೊನೆಯಲ್ಲಿ ಯುವರಾಜ್‌ ಸಿಂಗ್‌ (53 ರನ್‌) ಹಾಗೂ ಕೃಣಾಲ್‌ ಪಾಂಡ್ಯ (32 ರನ್‌) ಸ್ಫೋಟಕ ಬ್ಯಾಟಿಂಗ್‌ ನಡೆಸಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ 19.2 ಓವರ್‌ಗೆ ಎಲ್ಲ ವಿಕೆಟ್‌ ಕಳೆದುಕೊಂಡು 176 ರನ್‌ಗಳಿಸಿ ಸೋಲು ಅನುಭವಿಸಿತು.

ಗುಡುಗಿದ ರಿಷಭ್‌: ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ತಂಡಕ್ಕೆ ರಿಷಭ್‌ ಪಂತ್‌ (ಅಜೇಯ 78 ರನ್‌) ಸ್ಫೋಟಕ ಬ್ಯಾಟಿಂಗ್‌ನಿಂದ ನೆರವಾದರು.

ಇವರ ಪ್ರಚಂಡ ಬ್ಯಾಟಿಂಗ್‌ನಿಂದಾಗಿ ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗೆ 6 ವಿಕೆಟ್‌ಗೆ ಬರೋಬ್ಬರಿ 213 ರನ್‌ಗಳಿಸಿತು. ಕೇವಲ 27 ಎಸೆತದಿಂದ ಪಂತ್‌ ಅರ್ಧಶತಕ ಸಿಡಿಸಿದರು. 7 ಬೌಂಡರಿ ಹಾಗೂ 7 ಸಿಕ್ಸರ್‌ ಚಚ್ಚಿ ಆಕ್ರಮಣಕಾರಿ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌ : ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗೆ 213/6 (ರಿಷಭ್‌ ಪಂತ್‌ ಅಜೇಯ 78, ಇನ್‌ ಗ್ರಾಮ್‌ 47, ಮೆಕ್ಲೆನಗನ್‌ 40ಕ್ಕೆ3), ಮುಂಬೈ ಇಂಡಿಯನ್ಸ್‌ 19.2 ಓವರ್‌ಗೆ 176/10 (ಯುವರಾಜ್‌ ಸಿಂಗ್‌ 53, ಕೃಣಾಲ್‌ ಪಾಂಡ್ಯ 32, ರಬಾಡ 23ಕ್ಕೆ2)

Advertisement
Advertisement

Udayavani is now on Telegram. Click here to join our channel and stay updated with the latest news.

Next