Advertisement

ಡೆಲ್ಲಿ ಸೋತರೆ ಪ್ಲೇ ಆಫ್ ತೇರ್ಗಡೆ ದಾರಿ ದುರ್ಗಮ

06:00 AM May 02, 2018 | Team Udayavani |

ಹೊಸದಿಲ್ಲಿ: ಆಡಿದ 8 ಪಂದ್ಯಗಳಲ್ಲಿ ಆರರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಪ್ಲೇ ಆಫ್ನಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದೆ. ಪ್ಲೇ ಆಫ್ ಹಾದಿಯನ್ನು ಜೀವಂತವಿರಿಸಿಕೊಳ್ಳಬೇಕಾದರೆ ನೂತನ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಪಡೆ ಮುಂದಿನ ಪ್ರತಿಯೊಂದು ಪಂದ್ಯವನ್ನು ನಾಕೌಟ್‌ ಪಂದ್ಯವೆಂದು ಭಾವಿಸಿ ಹೋರಾಡಬೇಕಾ ಗಿದೆ. ಇನ್ನುಳಿದ ಎಲ್ಲ ಪಂದ್ಯಗಳಲ್ಲಿ ಗೆದ್ದರೆ ಡೆಲ್ಲಿಗೆ ಮುನ್ನಡೆಯುವ ಅವಕಾಶ ಸಿಗುವ ಸಾಧ್ಯತೆಯಿದೆ.

Advertisement

ಸೋಮವಾರದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಹೋರಾಡಿ ಸೋತಿದ್ದ ಡೆಲ್ಲಿ ತಂಡ ಬುಧವಾರದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಎದುರಿಸಲಿದೆ. ರಾಜಸ್ಥಾನ ಕೂಡ ಈ ಕೂಟದಲ್ಲಿ ಸಾಧಾರಣ ನಿರ್ವಹಣೆ ನೀಡಿದೆ. ಹಾಗಾಗಿ ಉಭಯ ತಂಡಗಳು ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿ ಸುವ ಸಾಧ್ಯತೆಯಿದೆ. ಚೆನ್ನೈ ವಿರುದ್ಧ ಡೆಲ್ಲಿಯ ವೀರಾವೇಶದ ಆಟ ಗಮನಿಸಿದರೆ ಜಯಭೇರಿ ಹೊಡೆದರೂ ಸಂಶಯವಿಲ್ಲ.

ಸತತ ಸೋಲಿನ ಬಳಿಕ ಗೌತಮ್‌ ಗಂಭೀರ್‌ ನಾಯಕತ್ವ ತ್ಯಜಿಸಿದ ಅನಂತರ ಶ್ರೇಯಸ್‌ ಅಯ್ಯರ್‌ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿದರಲ್ಲದೇ ಮೊದಲ ಪಂದ್ಯದಲ್ಲಿ 40 ಎಸೆತಗಳಿಂದ ಅಜೇಯ 93 ರನ್‌ ಸಿಡಿಸಿ ತಂಡಕ್ಕೆ ಪ್ರಚಂಡ ಜಯ ತಂದುಕೊಟ್ಟಿದ್ದರು. ಆದರೆ ಚೆನ್ನೈ ವಿರುದ್ಧ ತಂಡ 13 ರನ್ನಿನಿಂದ ಸೋತು ನಿರಾಶೆ ಅನುಭವಿಸಿತು. ಆದರೆ ಈ ಪಂದ್ಯದಲ್ಲಿ ತಂಡ ಕೊನೆ ಕ್ಷಣದವ ರೆಗೂ ಗೆಲುವಿಗಾಗಿ ಹೋರಾಡಿದ್ದನ್ನು ಮರೆಯುವಂತಿಲ್ಲ. ಚೆನ್ನೈಯ 211 ರನ್ನಿಗೆ ಉತ್ತರವಾಗಿ ದಿಟ್ಟ ಉತ್ತರ ನೀಡಿದ ಡೆಲ್ಲಿ ತಂಡ 198 ರನ್‌ ಗಳಿಸಿ ಶರಣಾಯಿತು. ಶ್ರೇಯಸ್‌ ವಿಫ‌ಲರಾದರೂ ರಿಷಬ್‌ ಪಂತ್‌ 45 ಎಸೆತಗಳಿಂದ 79 ಮತ್ತು ವಿಜಯ್‌ ಶಂಕರ್‌ 31 ಎಸೆತಗಳಿಂದ 54 ರನ್‌ ಸಿಡಿಸಿದರು. 

ಅಯ್ಯರ್‌, ರಿಷಬ್‌ ಆಧಾರ
ಇಷ್ಟರವರೆಗಿನ ಪಂದ್ಯಗಳಲ್ಲಿ ಅಯ್ಯರ್‌ ಮತ್ತು ರಿಷಬ್‌ ಮಿಂಚಿದ್ದಾರೆ. ಅವರಿಬ್ಬರು ಅನುಕ್ರಮವಾಗಿ 306 ಮತ್ತು 257 ರನ್‌ ಪೇರಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾಗಿದ್ದಾರೆ. ಅವರಿಬ್ಬರು ಬುಧವಾರದ ಪಂದ್ಯದಲ್ಲೂ ಮಿಂಚಿದರೆ ಡೆಲ್ಲಿ ಗೆಲುವಿಗೆ ಪ್ರಯತ್ನಿಸಬಹುದು. ಡೆಲ್ಲಿಯ ಬೌಲಿಂಗ್‌ ಉತ್ತಮ ಮಟ್ಟದಲ್ಲಿದೆ. ಟ್ರೆಂಟ್‌ ಬೌಲ್ಟ್ 11 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಆದರೆ ಅವರಿಗೆ ಉಳಿದವರು ಉತ್ತಮ ಸಹಕಾರ ನೀಡುತ್ತಿಲ್ಲ.

5ನೇ ಸ್ಥಾನದಲ್ಲಿ  ರಾಜಸ್ಥಾನ
ಆಡಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿರುವ ರಾಜಸ್ಥಾನ ರಾಯಲ್ಸ್‌ ಆರಂಕದೊಂದಿಗೆ ಐದನೇ ಸ್ಥಾನದಲ್ಲಿದೆ. ಅಜಿಂಕ್ಯ ರಹಾನೆ ನೇತೃತ್ವದ ತಂಡ ಸ್ಥಿರವಾದ ನಿರ್ವಹಣೆ ನೀಡುತ್ತಿಲ್ಲ. ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು 151 ರನ್‌ ಸವಾಲಿದ್ದರೂ ರಾಜಸ್ಥಾನ 11 ರನ್ನಿನಿಂದ ಸೋತು ಆಘಾತಕ್ಕೆ ಒಳಗಾಗಿತ್ತು. ಈ ಪಂದ್ಯದಲ್ಲಿ ರಹಾನೆ 65 ಮತ್ತು ಸ್ಯಾಮ್ಸನ್‌ 40 ರನ್‌ ಗಳಿಸಿದ್ದರೂ ಉಳಿದ ಆಟಗಾರರು ಉತ್ತಮ ಬೆಃಬಲ ನೀಡಲಿಲ್ಲ. ಈ ಋತುವಿನಲ್ಲಿ ರಹಾನೆ ಮತ್ತು ಸ್ಯಾಮ್ಸನ್‌ ಮಾತ್ರ ಉತ್ತಮ ನಿರ್ವಹಣೆ ನೀಡಿದ್ದಾರೆ. ಉಳಿದಂತೆ ಬೆನ್‌ ಸ್ಟೋಕ್ಸ್‌, ಬಟ್ಲರ್‌ ಅವರ ಅಸ್ಥಿರ ನಿರ್ವಹಣೆ ಮುಂದುವರಿದಿದೆ. ಬೌಲಿಂಗ್‌ದಲ್ಲಿ ಜೋಫ್ರಾ ಆರ್ಚರ್‌ ಅವರನ್ನು ಬಿಟ್ಟರೆ ಉಳಿದ ಬೌಲರ್‌ಗಳು ವಿಫ‌ಲರಾಗಿದ್ದಾರೆ.

Advertisement

ತಂಡವಾಗಿ ಉತ್ತಮ ನಿರ್ವಹಣೆ
ನಾವು ತಂಡವಾಗಿ ಉತ್ತಮ ನಿರ್ವಹಣೆ ನೀಡುತ್ತಿದ್ದೇವೆ. ಆದರೆ ಚಿಕ್ಕಪುಟ್ಟ ವಿಷಯದಿಂದಾಗಿ ನಾವು ಪಂದ್ಯವನ್ನು ಕಳೆದು ಕೊಳ್ಳುತ್ತಿದ್ದೇವೆ ಎಂದು ವಿಜಯ ಶಂಕರ್‌ ಹೇಳಿದರು. ನಾವು ಚೆನ್ನೈಯಂತಹ ಬಲಿಷ್ಠ ತಂಡದೆದುರು 6 ಓವರ್‌ಗಳಲ್ಲಿ 80 ರನ್‌ ಗಳಿಸುವ ಸಾಹಸಕ್ಕೆ ಪ್ರಯತ್ನಿಸಿದೆವು ಮತ್ತು ಸನಿಹದವರೆಗೆ ಬಂದು 13 ರನ್ನಿನಿಂದ ಸೋತೆವು. ನಾವು ಗೆಲುವಿಗಾಗಿ ಬಹಳಷ್ಟು ಪ್ರಯತ್ನ ಪಟ್ಟೆವು. ಮುಂದಿನ ಪಂದ್ಯಗಳಲ್ಲಿ ಒಳ್ಳೆಯ ತಂಡವಾಗಿ ಉತ್ತಮ ಹೋರಾಟ ನೀಡಲು ಪ್ರಯತ್ನಿಸಲಿದ್ದೇವೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next