Advertisement

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

12:41 AM May 28, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಸಿಎಂ ಆಪ್ತ ಬಿಭವ್‌ ಕುಮಾರ್‌ಗೆ ಜಾಮೀನು ನೀಡಿದರೆ ಜೀವಕ್ಕೆ ಆಪತ್ತು ಎಂದು ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಆರೋಪಿಸಿದ್ದಾರೆ.

Advertisement

ಅವರು ಅತ್ಯಂತ ಪ್ರಭಾವಿ ವ್ಯಕ್ತಿ ಎಂದು ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ನಲ್ಲಿ ಸೋಮವಾರ ಆರೋಪಿಸಿದ್ದಾರೆ. ಬಿಭವ್‌ ಕುಮಾರ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಅವರು, ದಿಲ್ಲಿ ಸರಕಾರದ ಸಚಿವರಿಗೆ ಮೀಸಲಾಗಿ ಇರುವ ಸೌಲಭ್ಯಗಳನ್ನು ಅವರು ದುರ್ಬಳಕೆ ಮಾಡುತ್ತಿದ್ದಾರೆ ವಿಚಾರಣೆಯ ಒಂದು ಹಂತದಲ್ಲಿ ಸಂಸದೆ ಸ್ವಾತಿ ಮಲಿವಾಲ್‌ ದುಃಖ ಉಮ್ಮಳಿಸಿ ಬಂದು ಅತ್ತರು. ಬಿಭವ್‌ ಅವರಿಂದ ನನಗೆ, ಕುಟುಂಬಕ್ಕೆ ಅಪಾಯವಿದೆ ಎಂದೂ ದೂರಿದ್ದಾರೆ.

ಅದಕ್ಕೆ ತಿರುಗೇಟು ನೀಡಿದ ಬಿಭವ್‌ ಕುಮಾರ್‌ ಪರ ವಕೀಲರು ಸಂಸದೆ ಸ್ವಾತಿ ಮಲಿವಾಲ್‌ ಅವರು ಹಲ್ಲೆ ನಡೆದ ದಿನ ಭೇಟಿ ನಿಗದಿ ಮಾಡದೆ ಸಿಎಂ ನಿವಾಸಕ್ಕೆ ಆಗಮಿಸಿದ್ದರು. ಇದೊಂದು ರೀತಿ ಅತಿಕ್ರಮಣ ಎಂದು ಆರೋಪಿಸಿದ್ದಾರೆ.

ಬಿಭವ್‌ ಜಾಮೀನು ಅರ್ಜಿ ತಿರಸ್ಕಾರ
ಹಲ್ಲೆ ಘಟನೆಯಲ್ಲಿ ದಿಲ್ಲಿಯ ಸ್ಥಳೀಯ ಕೋರ್ಟ್‌ನಲ್ಲಿ ಜಾಮೀನು ಕೋರಿ ಬಿಭವ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿ ತಿರಸ್ಕತಗೊಂಡಿದೆ. ಈ ಆದೇಶದ ವಿರುದ್ಧ ದಿಲ್ಲಿ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಬಿಭವ್‌ ಕುಮಾರ್‌ ಪರ ವಕೀಲರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next