ರವಿವಾರ ಒಂದೇ ದಿನದಲ್ಲಿ 1295 ಪ್ರಕರಣಗಳು ವರದಿಯಾಗಿದ್ದು ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 19,844ಕ್ಕೆ ಏರಿದೆ. ಜತೆಗೆ ಮೃತಪಟ್ಟವರ ಸಂಖ್ಯೆ 473ಕ್ಕೆ ರಿಕೆಯಾಗಿದೆ.
ದಿನವೊಂದರಲ್ಲಿ 1200ರ ಮೇಲೆ ಕೋವಿಡ್ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರಿಂದ ಮೊದಲು ಅಂದರೆ ಮೇ 30ರಂದು ಅತ್ಯಧಿಕ 1163 ಕೇಸುಗಳು ವರದಿಯಾಗಿದ್ದು ಇದೇ ಅತ್ಯಧಿಕವಾಗಿತ್ತು. ಶನಿವಾರ ಇಟ್ಟು ಪ್ರಕರಣಗಳ ಸಂಖ್ಯೆ 18,549 ಆಗಿದ್ದು 416 ಮಂದಿ ಮೃತಪಟ್ಟಿದ್ದರು.
ಇದೇ ವೇಳೆ ಸರಕಾರಿ ನೌಕರರ ವೇತನ ಪಾವತಿಗೆ ಕೇಂದ್ರ 5 ಸಾವಿರ ಕೋಟಿ ರೂ. ನೆರವು ನೀಡಬೇಕು ಎಂದು ದಿಲ್ಲಿ ಸರಕಾರ ಕೇಳಿಕೊಂಡಿದೆ. ರಾಜಧಾನಿಯಲ್ಲಿ ತೆರಿಗೆ ಸಂಗ್ರಹ ವ್ಯಾಪಕ ಪ್ರಮಾಣದಲ್ಲಿ ಕುಸಿದಿದ್ದರಿಂದ ವೇತನ ಪಾವತಿಗೆ ಕೇಂದ್ರ ನೆರವು ನೀಡಬೇಕೆಂದು ಅದು ಕೇಳಿಕೊಂಡಿದೆ. ಲಾಕ್‌ಡೌನ್‌ನಿಂದಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿದ್ದು ತೆರಿಗೆ ಸಂಗ್ರಹದಲ್ಲಿ ಶೇ.85ರಷ್ಟು ಕಡಿಮೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾಧ್ಯಮಗಳಿಗೆ ಹೇಳಿದ್ದಾರೆ.
Advertisement