Advertisement

Court; ನಿರಂತರ ರೇಪ್ ಮಾಡಿ ಮಲ ಮಗಳನ್ನು ಗರ್ಭಿಣಿಯಾಗಿಸಿದವನಿಗೆ ಜೀವಾವಧಿ ಶಿಕ್ಷೆ

08:15 PM May 23, 2024 | Team Udayavani |

ಹೊಸದಿಲ್ಲಿ: ಅಪ್ರಾಪ್ತ ವಯಸ್ಕ ಮಲಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ್ದಕ್ಕಾಗಿ 33 ವರ್ಷದ ವ್ಯಕ್ತಿಗೆ ನ್ಯಾಯಾಲಯವು ಕಠಿನ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

Advertisement

2019 ರಲ್ಲಿ ಕೃತ್ಯ ಎಸಗಿ ಬಂಧನಕ್ಕೊಳಗಾಗಿದ್ದ. “ನೈತಿಕವಾಗಿ ಅಸಹ್ಯಕರ” ಸಂಭೋಗ ಪ್ರಕರಣದಲ್ಲಿ, ಅನಕ್ಷರಸ್ಥ ಅಪರಾಧಿಯ ಹೇಯ ಕೃತ್ಯ ಶಿಕ್ಷೆಯ ಪ್ರಮಾಣ ತಗ್ಗಿಸುವ ಅಂಶವೆಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಅಪರಾಧದ ಸ್ವರೂಪ ಮತ್ತು ದುರ್ಬಲ ಮಕ್ಕಳನ್ನು ಭಯಾನಕ ಅನುಭವಗಳಿಂದ ರಕ್ಷಿಸುವ ಸಮಾಜದ ಆಸಕ್ತಿಯಿಂದಾಗಿ ಅಪರಾಧಿ “ತೀವ್ರ ಶಿಕ್ಷೆ”ಗೆ ಅರ್ಹನಾಗಿದ್ದಾನೆ ಎಂದು ಹೇಳಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಬಿತಾ ಪುನಿಯಾ ಅವರು ಕಳೆದ ತಿಂಗಳಿನಿಂದ ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಮತ್ತು ತೀವ್ರತರವಾದ ಲೈಂಗಿಕ ದೌರ್ಜನ್ಯದ ದಂಡನೆಗೆ ಶಿಕ್ಷೆಗೆ ಗುರಿಯಾದ ಮಲತಂದೆಯ ವಿರುದ್ಧದ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಬಲಿಪಶುವಾದ ಮುಗ್ಧ ಮತ್ತು ಅಸಹಾಯಕ 16 ವರ್ಷ ವಯಸ್ಸಿನ ಹೆಣ್ಣು ಮಗು ಗರ್ಭಪಾತಕ್ಕೆ ಒಳಗಾಗಬೇಕಾಯಿತು ಎಂದು ನ್ಯಾಯಾಧೀಶೆ ಒತ್ತಿ ಹೇಳಿ ತೀರ್ಪು ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next