Advertisement

Karkala: ಕ್ರೇನ್‌ನಡಿಗೆ ಬಿದ್ದು ವೃದ್ಧ ಸಾವು

09:25 PM Jul 09, 2024 | Team Udayavani |

ಕಾರ್ಕಳ: ರಸ್ತೆ ಬದಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೃದ್ಧರೊಬ್ಬರು ಕ್ರೇನ್‌ ಅಡಿಗೆ ಬಿದ್ದು ಮೃತಪಟ್ಟ ಘಟನೆ ಜು.9ರಂದು ಜೋಡುರಸ್ತೆಯಲ್ಲಿ ನಡೆದಿದೆ.

Advertisement

ಜಲದುರ್ಗಾ ನಿವಾಸಿ ಅಂಗಾರ (75) ಅವರು ಜೋಡುರಸ್ತೆಯಿಂದ ಅಯ್ಯಪ್ಪನಗರ ಕಡೆಗೆ ರಸ್ತೆ ಬದಿ ನಡೆದು ತೆರಳುತ್ತಿದ್ದರು. ಅದೇ ರಸ್ತೆಯಲ್ಲಿ ಹಿಂದಿನಿಂದ ಕ್ರೇನ್‌ ಬಂದಿದ್ದು ಅರಿವಿಲ್ಲದೆ ವೃದ್ಧರು ರಸ್ತೆ ಕಡೆ ಬಂದಿದ್ದು ಈ ವೇಳೆ ಹಿಂದಿನಿಂದ ಬರುತಿದ್ದ ಕ್ರೇನ್‌ನಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next