Advertisement

ಛಪಾಕ್ ಸಿನಿಮಾ ವಿವಾದ; ಲಕ್ಷ್ಮೀ ಅಗರ್ವಾಲ್ ವಕೀಲರ ಪರ ಆದೇಶ ನೀಡಿದ ದಿಲ್ಲಿ ಕೋರ್ಟ್

10:11 AM Jan 10, 2020 | Nagendra Trasi |

ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್ ಯು ಕ್ಯಾಂಪಸ್ ಗೆ ಭೇಟಿ ತೀವ್ರ  ವಿವಾದಕ್ಕೊಳಗಾದ ನಂತರ ಇದೀಗ ಭಾರೀ ನಿರೀಕ್ಷೆ ಹುಟ್ಟಿಸಿರುವ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಜೀವನಾಧಾರಿತ ಛಪಾಕ್ ಸಿನಿಮಾದ ವಿಚಾರ ಕೋರ್ಟ್ ಕಟಕಟೆಗೆ ಏರಿದೆ.

Advertisement

ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಪರ ಕಾನೂನು ಹೋರಾಟ ನಡೆಸಿದ್ದ ಅಪರ್ಣಾ ಭಟ್ ಅವರು ಗುರುವಾರ ತಮ್ಮ ಫೇಸ್ ಬುಕ್ ನಲ್ಲಿ ಛಪಾಕ್ ಹಿಂದಿ ಸಿನಿಮಾದಲ್ಲಿ ತನಗೆ ಯಾವ ಕ್ರೆಡಿಟ್ (ಹೆಸರು)ಅನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದ್ದರು.

ನಂತರ ಛಪಾಕ್ ಸಿನಿಮಾ ನಿರ್ಮಾಪಕರ ವಿರುದ್ಧ ಅಪರ್ಣಾ ಭಟ್ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್, ಛಪಾಕ್ ಸಿನಿಮಾದಲ್ಲಿ ದೂರುದಾರರ (ಅಪರ್ಣಾ ಭಟ್) ಹೆಸರನ್ನು ನಮೂದಿಸಬೇಕು ಎಂದು ಸಿನಿಮಾ ನಿರ್ಮಾಪಕಿ ಮೇಘನಾ ಗುಲ್ಝಾರ್ ಗೆ ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.

ಛಪಾಕ್ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ್ದು, ಅದರಲ್ಲಿ ನನ್ನ ಹೆಸರನ್ನೇ ನಮೂದಿಸಿಲ್ಲ. ಲಕ್ಷ್ಮೀ ಅಗರ್ವಾಲ್ ಗೆ ಕಾನೂನು ಹೋರಾಟದಲ್ಲಿನ ನನ್ನ ಶ್ರಮವನ್ನೇ ಸಿನಿಮಾ ತಂಡ ಗುರುತಿಸಿಲ್ಲ. ನನಗೆ ಹಣ ಬೇಕಾಗಿಲ್ಲ, ಕ್ರೆಡಿಟ್ ಬೇಕಾಗಿದೆ ಎಂದು ಅಪರ್ಣಾ ಭಟ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next