Advertisement

ವಕೀಲ ಗೌತಮ್‌ ಖೇತಾನ್‌ ಇಡಿ ಕಸ್ಟಡಿ ಮತ್ತೆ 6 ದಿನ ವಿಸ್ತರಣೆ

11:45 AM Feb 02, 2019 | udayavani editorial |

ಹೊಸದಿಲ್ಲಿ : ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದ ಓರ್ವ ಆರೋಪಿಯಾಗಿರುವ ವಕೀಲ ಗೌತಮ್‌ ಖೇತಾನ್‌ ಅವರ ಜಾರಿ ನಿರ್ದೇಶನಾಲಯದ (ED) ಕಸ್ಟಡಿಯನ್ನು ದಿಲ್ಲಿ ನ್ಯಾಯಾಲಯ ಆರು ದಿನಗಳ ಮಟ್ಟಿಗೆ ವಿಸ್ತರಿಸಿದೆ.

Advertisement

ಗೌತಮ್‌ ಖೇತಾನ್‌ ಅವರು ಕಪ್ಪು ಹಣ ಹೊಂದಿದ್ದಾರೆ ಮತ್ತು ಹಣ ಅಕ್ರಮ ನಡೆಸಿದ್ದಾರೆ ಎಂಬ ಹೊಸ ಆರೋಪದಿಂದಾಗಿ ಅವರ ಇಡಿ ಕಸ್ಟಡಿಯನ್ನು ಕೋರ್ಟ್‌ ವಿಸ್ತರಿಸಿರುವುದಾಗಿ ತಿಳಿದು ಬಂದಿದೆ. 

ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದಲ್ಲಿ  ವಕೀಲ ಗೌತಮ್‌ ಖೇತಾನ್‌ ಅವರನ್ನು ಹಣ ಅಕ್ರಮ ತಡೆ ಕಾಯಿದೆ (ಪಿಎಂಎಲ್‌ಎ) ಪ್ರಕಾರ ಕಳೆದ ಜನವರಿ 25ರಂದು ಬಂಧಿಸಲಾಗಿತ್ತು. ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್‌ ಅವರು ಖೇತಾನ್‌ ರ ಇಡಿ ಕಸ್ಟಡಿಯನ್ನು ಇನ್ನೂ ಆರು ದಿನಗಳಿಗೆ ವಿಸ್ತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next