Advertisement

ಹಿಜ್ಬುಲ್‌ನ ನಾಲ್ವರು ಉಗ್ರರಿಗೆ ಜೈಲು ಶಿಕ್ಷೆ

12:40 AM Oct 26, 2021 | Team Udayavani |

ಹೊಸದಿಲ್ಲಿ: ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಯ ಇಬ್ಬರು ಉಗ್ರರಿಗೆ 12 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

Advertisement

ಇದರ ಜತೆಗೆ ಇದೇ ಸಂಘಟನೆಯ ಮತ್ತಿಬ್ಬರು ಸದಸ್ಯರಿಗೆ 10 ವರ್ಷ ಜೈಲು ಶಿಕ್ಷೆಯನ್ನು ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ಸೋಮವಾರ ವಿಧಿಸಿದೆ.

ದೇಶದಲ್ಲಿ ಉಗ್ರ ಕೃತ್ಯಗಳನ್ನು ಎಸಗಲು ಅನುಕೂಲವಾಗುವಂತೆ ನೆರೆಯ ದೇಶಗಳಿಂದ ವಿತ್ತೀಯ ನೆರವು ಪಡೆಯುತ್ತಿದ್ದರು ಎಂದು ಎನ್‌ಐಎ ಆರೋಪಿಸಿ, ತನಿಖೆ ನಡೆಸಿತ್ತು. ಅವರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಅನ್ವಯ ಕೇಸು ದಾಖಲಿಸಲಾಗಿದೆ.

ಬಂಧನ: ಇದೇ ವೇಳೆ ಬೇಹುಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಎಟಿಎಸ್‌ ವ್ಯಕ್ತಿಯನ್ನು ಬಂಧಿಸಿದೆ. ಆತ ಬಿಎಸ್‌ಎಫ್ಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. 2012ರಲ್ಲಿ ಸೇರಿದ್ದ ಆತ ದೇಶದ ರಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ಥಾನಕ್ಕೆ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸುತ್ತಿದ್ದ. ಆತನ ಬಳಿಯಿಂದ 2 ಫೋನ್‌ಗಳನ್ನೂ ವಶ ಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next