ನವದೆಹಲಿ: ಅಗಸ್ಟ ವೆಸ್ಟ್‌ಲ್ಯಾಂಡ್ ಚಾಪರ್ ಹರಗಣದೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ ಮಧ್ಯವರ್ತಿ, ತಿಹಾರ ಜೈಲಿನಲ್ಲಿ ರುವ ಕ್ರಿಶ್ಚಿಯನ್ ಮೈಕೆಲ್‌ನನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲ ಯಕ್ಕೆ (ಇ.ಡಿ) ಅವಕಾಶ ನೀಡಿ ದೆಹಲಿ ನ್ಯಾಯಾಲಯವು ಆದೇಶಿಸಿದೆ.
ಇಡಿ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ಎನ್.ಕೆ.ಮಟ್ಟಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾದೀಶರಾದ ಪುಲಸ್ತŒÂ ಪ್ರಮಚಲ ಅವರು, ಮೈಕಲ್‌ನನ್ನು ಮೇ 25 ಮತ್ತು 26ರಂದು ತಿಹಾರ ಜೈಲಿನ ಆವರಣ ದಲ್ಲೇ ವಿಚಾರಣೆಗೆ ಒಳಪಡಿಸುವಂತೆ ಸೂಚಿಸಿದರು.
ಪ್ರಕರಣ ಸಂಬಂಧ ಕೆಲವು ದಾಖಲೆಗಳೊಂದಿಗೆ ಆರೋಪಿ ಮೈಕಲ್‌ನನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆ ವೇಳೆ ಮಟ್ಟಾ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಇ.ಡಿ ಅಧಿಕಾರಿಗಳು 2018ರ ಡಿ.22ರಂದು ದುಬೆ„ನಲ್ಲಿ ಮೈಕೆಲ್‌ನನ್ನು ವಶಕ್ಕೆ ಪಡೆದಿದ್ದರು.