Advertisement
ದೆಹಲಿಯ ಮೂವರು ಪೊಲೀಸರು ಶನಿವಾರ ಶಾಹದಾರದ ಜಿಟಿಬಿ ಎನ್‌ಕ್ಲೇವ್‌ನಿಂದ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಹಣ ನೀಡದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪೊಲೀಸರು ಆತನಿಗೆ ಥಳಿಸಿದ್ದಾರೆ ಎಂದು ಹೇಳಲಾಗಿದೆ.
Related Articles
Advertisement
ತಾವು ಅಪರಾಧ ವಿಭಾಗದವರು ಎಂದು ಪೊಲೀಸರಲ್ಲಿ ಒಬ್ಬರು ಹೇಳಿದರು. ಮತ್ತೊಬ್ಬ ಆರೋಪಿ ತನ್ನ ಎದೆಯ ಮೇಲೆ ಪಿಸ್ತೂಲ್ ಎಳೆದುಕೊಂಡು ಜೇಬಿನಲ್ಲಿಟ್ಟಿದ್ದ 35 ಸಾವಿರವನ್ನು ಹೊರತೆಗೆದಿದ್ದಾನೆ. ನಂತರ ಅವರು ಐದು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ನಂತರ ಅವರನ್ನು ಶಹದಾರ ಜಿಲ್ಲೆಯ ವಿಶೇಷ ಸಿಬ್ಬಂದಿಯ ಕಚೇರಿಗೆ ಕರೆದೊಯ್ಯಲಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಲಂಕಾಗೆ ಆಘಾತ: ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ನಮೀಬಿಯಾ ವಿರುದ್ಧ ಸೋಲು
ಅಲ್ಲಿ ಅಧಿಕಾರಿಯೊಂದಿಗೆ ಮಾತನಾಡಿದ ಬಳಿಕ ಆರೋಪಿಗಳು ಅವರನ್ನು ಬಲವಂತವಾಗಿ ಮತ್ತೆ ಕಾರಿನಲ್ಲಿ ಕೂರಿಸಿದ್ದಾರೆ. ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದಾಗಿ ಹೇಳಿಕೊಂಡು ಆರೋಪಿಗಳು ಸಂತ್ರಸ್ತನನ್ನು ಜಿಟಿಬಿ ಆಸ್ಪತ್ರೆಯ ಸರ್ವೀಸ್ ಲೇನ್ ಗೆ ಕರೆದೊಯ್ದಿದ್ದಾರೆ. ಅಲ್ಲಿ ಮತ್ತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಂತರ ಸಂತ್ರಸ್ತ ವ್ಯಕ್ತಿ ಆರೋಪಿಗಳನ್ನು ಆತನ ಮನೆಗೆ ಕರೆದೊಯ್ದು ಸುಮಾರು 50,000 ರೂ ಹಣ ನೀಡಿದ್ದಾರೆ. ಸ್ನೇಹಿತನಿಂದ ಸಾಲ ಪಡೆದು ಸುಮಾರು 70 ಸಾವಿರ ರೂ ಹಣವನ್ನು ಗೌರವ್ ಅಲಿಯಾಸ್ ಅಣ್ಣ ಎಂಬಾತನ ಪತ್ನಿ ಖಾತೆಗೆ ವರ್ಗಾಯಿಸಿದ್ದಾನೆ. ಆ ಬಳಿಕ ಆರೋಪಿಗಳು ಆತನನ್ನು ಬಿಡುಗಡೆ ಮಾಡಿದರು.
ತನಿಖೆಯ ವೇಳೆ 6ನೇ ಬೆಟಾಲಿಯನ್‌ನಲ್ಲಿರುವ ಕಾನ್‌ಸ್ಟೆಬಲ್ ಅಮಿತ್ ಈ ಸಂಪೂರ್ಣ ಸಂಚು ರೂಪಿಸಿರುವುದು ಪತ್ತೆಯಾಗಿದೆ. ಆರೋಪಿ ವಾಹಿದ್ ಕಾರನ್ನು ಬಳಸಿಕೊಂಡಿದ್ದು, ಗೌರವ್ ಕೂಡ ಅಪರಾಧಕ್ಕೆ ಸೇರಿಕೊಂಡಿದ್ದಾನೆ. ಇದರಲ್ಲಿ ಒಬ್ಬ ಸಬ್ ಇನ್ಸ್ ಪೆಕ್ಟರ್ ಕೂಡ ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.