ಕೋಲ್ಕತಾ: ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ಅಧಿಪತ್ಯ ವಿಸ್ತರಿಸುತ್ತಿದ್ದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕೆಂಡಾಮಂಡಲವಾಗಿದ್ದು, ‘ಯಾವುದೇ ಕಾರಣಕ್ಕೂ ಬಂಗಾಳದಲ್ಲಿ ಕೋಮುವಾದಿ ಬಿಜೆಪಿ ಬೇರು ಬಿಡಲು ಅವಕಾಶ ನೀಡುವುದಿಲ್ಲ’ ಎಂದು ಗುಡುಗಿದ್ದಾರೆ.
‘ಬಿಜೆಪಿ ಬಂಗಾಳದಲ್ಲಿ ಅಧಿಕಾರ ನಡೆಸಲು ಪ್ರಯತ್ನಿಸಿದರೆ, ”ದಿಲ್ಲಿ ಚಲೋ” ಹೆಸರಿನಲ್ಲಿ ನನ್ನ ಗುರಿ ಕೆಂಪು ಕೋಟೆ ಆಗಿದೆ’ ಎಂದಿದ್ದಾರೆ.
‘ತೃಣಮೂಲ ಕಾಂಗ್ರೆಸ್‌ಗೆ ದೇಶದ ಸುಧಾರಣೆ ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ’ ಎಂದರು.
‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಶ್ಚಿಮ ಬಂಗಾಳದಲ್ಲಿ ಕೋಮುಗಲಭೆ ಎಬ್ಬಿಸಲು ಹುನ್ನಾರ ನಡೆಸುತ್ತಿದೆ’ ಎಂದು ಆರೋಪಿಸಿದ್ದು ಕೋಮು ದಳ್ಳುರಿ ನಡೆಸಲು ಸಂಚು ಹೂಡಿದವರನ್ನು ಹಿಡಿದು ಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿದರು.
‘ಭವಿಷ್ಯದಲ್ಲಿ ಬಂಗಾಳ ದೇಶವನ್ನು ಗೆಲ್ಲುತ್ತದೆ ಮಾತ್ರವಲ್ಲದೆ ವಿಶ್ವವನ್ನೂ ಗೆಲ್ಲುತ್ತದೆ’ ಎನ್ನುವ ಮೂಲಕ ತಾನು ಮೋದಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಪ್ರತಿಸ್ಫರ್ಧಿ ಎನ್ನುವುದನ್ನು ಪರೋಕ್ಷವಾಗಿ ಘೋಷಿಸಿದರು.