ದುಬೈ: ಭಾನುವಾರ ನಡೆದ ಪಂಜಾಬ್ ಮತ್ತು ಡೆಲ್ಲಿ ನಡುವಿನ ಪಂದ್ಯ ಹಲವು ವಿವಾದಗಳ ಕೇಂದ್ರವಾಗಿದೆ. ಪಂದ್ಯಕ್ಕೂ ಮುನ್ನ ವೀಕ್ಷಕ ವಿವರಣೆಕಾರ ಸೈಮನ್ ಡೌಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ನೀಡಿದ ಪ್ರತಿಕ್ರಿಯೆಯೊಂದು ಸ್ವಹಿತಾಸಕ್ತಿ ಸಂಘರ್ಷದ ಪ್ರಶ್ನೆ ಹುಟ್ಟಲು ಕಾರಣವಾಗಿದೆ.
ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಯಂತಹ ದಿಗ್ಗಜರನ್ನು ಹೊಂದಿರುವ ನಾನು ಅದೃಷ್ಟಶಾಲಿ. ಅವರಿಂದ ನನ್ನ ಅರ್ಧದಷ್ಟು ಕೆಲಸ ಹಗುರಾಗುತ್ತದೆ ಎಂದು ಶ್ರೇಯಸ್ ಹೇಳಿದ್ದರು. ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಡೆಲ್ಲಿ ತಂಡದ ಸಲಹೆಗಾರರಾಗಲು ಹೇಗೆ ಸಾಧ್ಯ ಎಂದು ಬಿಸಿಸಿಐ ಪದಾಧಿಕಾರಿಗಳು, ಇತರೆ ಫ್ರಾಂಚೈಸಿಗಳು ಪ್ರಶ್ನಿಸಿವೆ.
ಇದನ್ನೂ ಓದಿ: ಚಹಾಲ್ ಬಿಗಿ ಬೌಲಿಂಗ್; 10 ರನ್ ಗಳ ಅಮೋಘ ಗೆಲುವು ಸಾಧಿಸಿದ ಆರ್ ಸಿ ಬಿ
ಕಳೆದವರ್ಷ ಗಂಗೂಲಿ ಡೆಲ್ಲಿ ತಂಡದ ಸಲಹೆಗಾರರಾಗಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ಹಾಗೆಯೇ ತಂಡದ ಸಹ ಮಾಲಿಕ ಸಂಸ್ಥೆ ಜೆಎಸ್‌ಡಬ್ಲೂ ಜೊತೆಗೂ ಗಂಗೂಲಿಗೆ ಉತ್ತಮ ಬಾಂಧವ್ಯವಿದೆ. ಇವೆಲ್ಲವೂ ಹಲವು ಗುಮಾನಿಗಳನ್ನು ಹುಟ್ಟು ಹಾಕಿದೆ.
ಆದರೆ ಇನ್ನು ಕೆಲವರು, ಸಹಜವಾಗಿ ಅಥವಾ ಬಾಯಿ ತಪ್ಪಿ ಶ್ರೇಯಸ್ ಐಯ್ಯರ್ ಹಾಗೆ ಹೇಳಿದ್ದಾರೆ. ಅದನ್ನು ದೊಡ್ಡ ವಿವಾದ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.