Advertisement
ಚೇಸಿಂಗ್ ವೇಳೆ ನಾಯಕಿ ಸ್ಮತಿ ಮಂಧನಾ (5) ಬೇಗ ಔಟಾದರು. ಎಲ್ಲಿಸ್ ಪೆರ್ರಿ (49) ಮತ್ತು ಸೋಫಿ ಮೊಲಿನಾಕ್ಸ್ (33) 2ನೇ ವಿಕೆಟಿಗೆ 80 ರನ್ ಪೇರಿಸಿ ಹೋರಾಟ ಜಾರಿಯಲ್ಲಿರಿಸಿದರು. ಬಳಿಕ ರಿಚಾ ಘೋಷ್ (51) ಸಿಡಿದು ನಿಂತರು. ಅಂತಿಮ ಓವರ್‌ನಲ್ಲಿ ಆರ್‌ಸಿಬಿ ಜಯಕ್ಕೆ 17 ರನ್ ಬೇಕಿತ್ತು. ಅಂತಿಮ ಎಸೆತದಲ್ಲಿ ರಿಚಾ ರನೌಟ್ ಆದರು.ಡೆಲ್ಲಿ ಆರಂಭದಿಂದಲೇ ಬಿರುಸಿನ ಆಟಕ್ಕಿಳಿಯಿತು. ಅಗ್ರ ಕ್ರಮಾಂಕದ ಆಟಗಾರ್ತಿಯರೆಲ್ಲ ಉತ್ತಮ ಮೊತ್ತ ಪೇರಿಸಿದರು. ಜೆಮಿಮಾ ರೋಡ್ರಿಗಸ್ ಅವರಿಂದ ಅರ್ಧ ಶತಕ ದಾಖಲಾಯಿತು (58). ಅಲೈಸ್ ಕ್ಯಾಪ್ಸಿ 48, ಆರಂಭಿಕರಾದ ಮೆಗ್ ಲ್ಯಾನಿಂಗ್ 29 ಮತ್ತು ಶಫಾಲಿ ವರ್ಮ 23 ರನ್ ಹೊಡೆದರು.
ಶನಿವಾರದ ಗುಜರಾತ್ ವಿರುದ್ಧದ ದೊಡ್ಡ ಮೊತ್ತದ ಪಂದ್ಯವನ್ನು ಯಶಸ್ವಿಯಾಗಿ ಚೇಸ್ ಮಾಡಿದ ಬಳಿಕ ಮಾತಾಡಿದ ಮುಂಬೈ ಇಂಡಿಯನ್ಸ್ ನಾಯಕಿ, “ಇದೊಂದು ಬಿಗ್ ಮ್ಯಾಚ್ ಆಗಿತ್ತು. ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವೆಂಬ ಕಾರಣಕ್ಕೆ ಖುಷಿಯಾಗುತ್ತಿದೆ. ನನ್ನ ಬ್ಯಾಟಿಂಗ್ ಫಾರ್ಮ್ ತೃಪ್ತಿ ನೀಡಿದೆ’ ಎಂದು ಹೇಳಿದರು.
ಗುಜರಾತ್ 7 ವಿಕೆಟಿಗೆ 190 ರನ್ ಪೇರಿಸಿದರೆ, ಮುಂಬೈ 19.5 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 191 ರನ್ ಬಾರಿಸಿತು. ಕೌರ್ ಕೇವಲ 48 ಎಸೆತಗಳಿಂದ ಅಜೇಯ 95 ರನ್ ಸಿಡಿಸಿ (10 ಫೋರ್, 5 ಸಿಕ್ಸರ್) ಮುಂಬೈ ಗೆಲುವಿನ ರೂವಾರಿ ಎನಿಸಿದರು.