Advertisement
ಈ ಕೋಟ್ಲಾ ಕಾಳಗದಲ್ಲಿ ಗೆದ್ದರೆ ಆರ್‌ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿರುತ್ತದೆ. ಸೋತರೆ ಕೂಟದಿಂದ ಹೊರಬೀಳಲಿದೆ. ಹಾಗೆಯೇ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಈ ಪಂದ್ಯ ಗೆದ್ದರೆ ಪ್ಲೇ ಆಫ್ಗೆ ಹತ್ತರವಾಗಲಿದೆ. ಸದ್ಯ ಡೆಲ್ಲಿ ಒಟ್ಟು 11 ಪಂದ್ಯಗಳಲ್ಲಿ 7 ಜಯ, 4 ಸೋಲಿನೊಂದಿಗೆ 3ನೇ ಸ್ಥಾನದಲ್ಲಿದೆ. ಬೆಂಗಳೂರು ಮತ್ತೆ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಬೌಲಿಂಗ್‌ಗೆ ಹೋಲಿಸಿದರೆ ಬೆಂಗಳೂರು ಬ್ಯಾಟಿಂಗ್‌ನಲ್ಲಿ ಹೆಚ್ಚು ಬಲಿಷ್ಠ. ಕೊಹ್ಲಿ-ಪಾರ್ಥಿವ್ ಆರಂಭಿಕರಾಗಿ ಕ್ಲಿಕ್ ಆಗುತ್ತಿದ್ದಾರೆ. ಎಬಿ ಡಿ ವಿಲಿಯರ್ ಅಗ್ರ ಕ್ರಮಾಂಕದಲ್ಲಿ ಸ್ಫೋಟಿಸುತ್ತಿದ್ದಾರೆ. ಮೊಯಿನ್ ಅಲಿ ಆಲ್‌ರೌಂಡರ್ ಆಗಿ ಮಿಂಚುತ್ತಿದ್ದಾರೆ. ಸ್ಟೋಯಿನಿಸ್ ಕೂಡ ಸದ್ದು ಮಾಡುತ್ತಿದ್ದಾರೆ.
ಆದರೆ ಬೆಂಗಳೂರಿಗೆ ಬೌಲಿಂಗ್‌ನದ್ದೇ ದೊಡ್ಡ ಚಿಂತೆಯಾಗಿದೆ. ವೇಗಿ ಡೇಲ್ ಸ್ಟೇನ್ ಎರಡೇ ಪಂದ್ಯವಾಡಿ ಐಪಿಎಲ್‌ನಿಂದ ಹೊರಬಿದ್ದಿರುವುದು ದೊಡ್ಡ ಹೊಡೆತ. ಟೀಮ್ ಇಂಡಿಯಾದ ಉಮೇಶ್ ಯಾದವ್ ಮೇಲೆ ನಂಬಿಕೆ ಇಡಲಾಗದು. ನವದೀಪ್ ಸೈನಿ ಪರಾÌಗಿಲ್ಲ. ಚಾಹಲ್ ಮ್ಯಾಜಿಕ್ ನಡೆದರೆ ಆರ್‌ಸಿಬಿ ಮೇಲುಗೈ ಸಾಧಿಸಬಹುದು.
Related Articles
ಪ್ಲೇ ಆಫ್ ಓಟಕ್ಕಾಗಿ ತವರಿನ ಈ ಪಂದ್ಯ ಡೆಲ್ಲಿಗೆ ಅತ್ಯಂತ ಮಹತ್ವದ್ದಾಗಿದೆ. ಶಿಖರ್ ಧವನ್, ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಷಭ್ ಪಂತ್, ಅಕ್ಷರ್ ಪಟೇಲ್ ಅವರಂತಹ ದೇಶಿ ಕ್ರಿಕೆಟ್ ಪ್ರತಿಭೆಗಳು ತಂಡದ ಆಸ್ತಿಯಾಗಿದ್ದಾರೆ. ಬೌಲಿಂಗ್‌ನಲ್ಲಿ ವೇಗಿ ಕಾಗಿಸೊ ರಬಾಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಶಾಂತ್, ಲಮಿಚಾನೆ, ಆಲ್‌ರೌಂಡರ್ ಮಾರಿಸ್ ಕೂಡ ಲಯದಲ್ಲಿದ್ದಾರೆ.
Advertisement