Advertisement
ಲಕ್ನೋ ತಂಡಕ್ಕೆ ಮಾರ್ಕಸ್ ಸ್ಟಾಯಿನಿಸ್, ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ಅನ್ರಿಚ್ ನೋರ್ಜೆ ಸೇರಿಕೊಳ್ಳುವುದು ಖಾತ್ರಿಗೊಂಡಿರುವುದರಿಂದ ಇತ್ತಂಡಗಳ ಜೋಶ್ ಕೂಡ ಅಷ್ಟೇ ಮಟ್ಟದಲ್ಲಿ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಕೆ.ಎಲ್.ರಾಹುಲ್-ರಿಷಭ್ ಪಂತ್ ತಂಡಗಳ ನಡುವಿನ ಮೇಲಾಟ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.ಇವರಿಬ್ಬರೂ ಸ್ವಂತ ಬ್ಯಾಟಿಂಗ್ ಬಲದಿಂದ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರೂ ತಾರಾ ಆಟಗಾರರ ಆಗಮನದಿಂದ ಇಡೀ ತಂಡದ ಮನೋಬಲವೇ ಬದಲಾಗುವುದರಲ್ಲಿ ಅನುಮಾನವಿಲ್ಲ.
Related Articles
Advertisement
ಇದನ್ನೂ ಓದಿ:ಐಪಿಎಲ್ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್
ಲಕ್ನೋಗೆ ಒಲಿಯುತ್ತಿದೆ ಲಕ್ಮೊದಲ ಪಂದ್ಯದಲ್ಲಿ ಮತ್ತೊಂದು ನೂತನ ತಂಡವಾದ ಗುಜರಾತ್‌ಗೆ ಶರಣಾಗಿದ್ದ ಲಕ್ನೋ, ಅನಂತರದ ಎರಡೂ ಮುಖಾಮುಖಿಗಳಲ್ಲಿ ತನ್ನ ಲಕ್ ಸಾಬೀತುಪಡಿಸಲಾರಂಭಿಸಿದೆ. ಚೆನ್ನೈ ವಿರುದ್ಧ 6 ವಿಕೆಟ್ ಹಾಗೂ ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 12 ರನ್ನುಗಳ ರೋಚಕ ಜಯ ಸಾಧಿಸಿದೆ. ಆದರೆ ಡೆಲ್ಲಿ ಸವಾಲು ಇವೆರಡಕ್ಕಿಂತ ಮಿಗಿಲಾದುದು! ಲಕ್ನೋಗೆ ಬ್ಯಾಟಿಂಗ್ ಚಿಂತೆ
ಲಕ್ನೋ ಬ್ಯಾಟಿಂಗ್ ವಿಭಾಗ ಕೆ.ಎಲ್. ರಾಹುಲ್, ದೀಪಕ್ ಹೂಡಾ ಮತ್ತು ಯುವ ಬ್ಯಾಟರ್ ಆಯುಷ್ ಬದೋನಿ ಅವರನ್ನು ಹೆಚ್ಚು ಅವಲಂಬಿಸಿದೆ. ಚೆನ್ನೈ ವಿರುದ್ಧ ಸಿಡಿದ ಡಿ ಕಾಕ್, ಲೆವಿಸ್ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಆದರೆ ಮನೀಷ್ ಪಾಂಡೆ ಅವರ ಸತತ ವೈಫಲ್ಯ ಚಿಂತಿಸುವಂತೆ ಮಾಡಿದೆ. ಕೃಣಾಲ್ ಪಾಂಡ್ಯ ಬ್ಯಾಟ್ ಕೂಡ ಮುಷ್ಕರ ಹೂಡಿದೆ. ಒಟ್ಟಾರೆ ಲಕ್ನೋ ಬ್ಯಾಟಿಂಗ್ ಯೂನಿಟ್ ನೂತನ ಜೋಶ್ ಪಡೆದರೆ ಸ್ಪರ್ಧೆ ಹೆಚ್ಚು ರೋಚಕಗೊಳ್ಳಲಿದೆ. ಬ್ಯಾಟಿಂಗ್‌ಗೆ ಹೋಲಿಸಿದರೆ ಲಕ್ನೋ ಬೌಲಿಂಗ್ ದುರ್ಬಲ. ಭರವಸೆಯ ದಾಳಿ ಸಂಘಟಿಸುತ್ತಿರುವುದು ರವಿ ಬಿಷ್ಣೋಯಿ ಮಾತ್ರ.