ಮುಂಬಯಿ: ಮುಂಬೈ ಇಂಡಿಯನ್ಸ್‌ಗೆ 9 ವಿಕೆಟ್‌ಗಳ ಸೋಲು ಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ವನಿತಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಅಗ್ರಸ್ಥಾನಕ್ಕೆ ನೆಗೆದಿದೆ.
ಸತತ 5 ಪಂದ್ಯಗಳನ್ನು ಗೆದ್ದು ಓಟ ಬೆಳೆಸಿದ್ದ ಮುಂಬೈ ಸತತ 2ನೇ ಸೋಲಿಗೆ ತುತ್ತಾಯಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೌರ್ ಬಳಗಕ್ಕೆ ಗಳಿಸಲು ಸಾಧ್ಯವಾ ದದ್ದು 8ಕ್ಕೆ 109 ರನ್ ಮಾತ್ರ. ಸ್ಫೋಟಕ ಜವಾಬು ನೀಡಿದ ಡೆಲ್ಲಿ ಕೇವಲ 9 ಓವರ್‌ಗಳಲ್ಲಿ ಒಂದು ವಿಕೆಟಿಗೆ 110 ರನ್ ಗಳಿಸಿ ಸುಲಭ ಜಯ ಸಾಧಿಸಿತು. ಶಫಾಲಿ ವರ್ಮ 33 ರನ್ ಹೊಡೆದರೆ, ಮೆಗ್ ಲ್ಯಾನಿಂಗ್ 32 ಮತ್ತು ಅಲೈಸ್ ಕ್ಯಾಪ್ಸಿ 38 ರನ್ ಮಾಡಿ ಅಜೇಯರಾಗಿ ಉಳಿದರು.
ಡೆಲ್ಲಿ ಮತ್ತು ಮುಂಬೈ ತಲಾ 5 ಜಯದೊಂದಿಗೆ 10 ಅಂಕ ಗಳಿಸಿವೆ. ರನ್‌ರೇಟ್‌ನಲ್ಲಿ ಡೆಲ್ಲಿ ಮೇಲೇರಿತು (+1.978). ಮುಂಬೈ +1.725 ರನ್‌ರೇಟ್ ಹೊಂದಿದೆ.
ಮರಿಜಾನ್ ಕಾಪ್, ಶಿಖಾ ಪಾಂಡೆ, ಜೆಸ್ ಜೊನಾಸೆನ್ ಮುಂಬೈಗೆ ಭರ್ಜರಿ ಕಡಿವಾಣ ಹಾಕಿದರು. ಮೂವರೂ ತಲಾ 2 ವಿಕೆಟ್ ಕೆಡವಿದರು. ಪೂಜಾ ವಸ್ತ್ರಾಕರ್ ಸರ್ವಾಧಿಕ 26, ಕೌರ್ ಮತ್ತು ವೋಂಗ್ ತಲಾ 23 ರನ್ ಹೊಡೆದರು.