Advertisement

ಐಪಿಎಲ್ ಗೆ ಕೋವಿಡ್ ಕಾಟ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಆಟಗಾರನಿಗೆ ಕೋವಿಡ್ ಪಾಸಿಟಿವ್

02:44 PM Apr 03, 2021 | Team Udayavani |

ಮುಂಬೈ: ವಿಶ್ವದ ಶ್ರೀಮಂತ ಟಿ20 ಕೂಟ ಐಪಿಎಲ್ ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಎಲ್ಲಾ ತಂಡಗಳು ಸಿದ್ದತೆಯಲ್ಲಿ ತೊಡಗಿದೆ. ಆದರೆ ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

Advertisement

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ಗೆ ಕೋವಿಡ್ ಸೋಂಕು ದೃಢವಾಗಿದೆ. “ದುರಾದೃಷ್ಟವಶಾತ್ ಅಕ್ಷರ್ ಪಟೇಲ್ ಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಅವರು ಐಸಲೋಶನ್ ನಲ್ಲಿದ್ದು, ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ” ಎಂದು ಫ್ರಾಂಚೈಸಿ ತಿಳಿಸಿದೆ.

ಇದನ್ನೂ ಓದಿ:ಒಂದು ಅಪರೂಪದ ಸಂದರ್ಶನ; ಯುವ ಧೋನಿ ವರ್ಸಸ್‌ ನಿವೃತ್ತ ಧೋನಿ!

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿತೀಶ್ ರಾಣಾ ಗೆ ಕೆಲ ದಿನದ ಹಿಂದೆ ಕೋವಿಡ್ ಸೋಂಕು ತಾಗಿತ್ತು. ಸದ್ಯ ನಿತೀಶ್ ರಾಣಾ ಗುಣಮುಖವಾಗಿದ್ದು, ನೆಗೆಟಿವ್ ವರದಿ ಬಂದಿದೆ.

ಎಪ್ರಿಲ್ 9ರಂದು 14ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ.

Advertisement

ಇದನ್ನೂ ಓದಿ: ಧೋನಿ ಸಿಕ್ಸರ್‌ನಿಂದಲೇ ಭಾರತ ಚಾಂಪಿಯನ್‌ ಆದದ್ದಲ್ಲ : ಗೌತಮ್‌ ಗಂಭೀರ್‌ ಗಂಭೀರ ಮಾತು

Advertisement

Udayavani is now on Telegram. Click here to join our channel and stay updated with the latest news.

Next