Advertisement

ಐಪಿಎಲ್ ಬಿಟ್ಟು ತವರಿಗೆ ಮರಳಿದ ರಬಾಡ

03:10 AM May 04, 2019 | Team Udayavani |

ಮುಂಬೈ: ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಐಪಿಎಲ್‌ನ ಇನ್ನುಳಿದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಹೇಳಿದೆ.

Advertisement

ಏಕದಿನ ವಿಶ್ವಕಪ್‌ ಕೂಟವನ್ನು ಗಮನದಲ್ಲಿರಿಸಿಕೊಂಡು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮುನ್ನೆಚ್ಚರಿಕೆಯಾಗಿ ರಬಾಡ ಅವರನ್ನು ತವರಿಗೆ ಮರಳುವಂತೆ ತಿಳಿಸಿದೆ. ಹೀಗಾಗಿ ಅವರು ತಂಡವನ್ನು ತೊರೆದು ತವರಿಗೆ ಹೋಗಲಿದ್ದಾರೆ ಎಂದು ಡೆಲ್ಲಿ ತಂಡ ಹೇಳಿದೆ.

ಬುಧವಾರದ ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ತೀವ್ರ ಬೆನ್ನು ನೋವಿಗೆ ತುತ್ತಾದ ರಬಾಡ ಆ ಪಂದ್ಯದಿಂದ ಹೊರಗುಳಿದಿದ್ದರು. ರಬಾಡ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಂಡಿರುವ ಸಿಎಸ್‌ಎ ಅವರಿಗೆ ತವರಿಗೆ ವಾಪಸಾಗುವಂತೆ ಸಂದೇಶ ರವಾನಿಸಿದೆ.

‘ಕೂಟದ ಈ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲು ತುಂಬಾ ಕಷ್ಟವಾಗುತ್ತಿದೆ. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವಕಪ್‌ ಆರಂಭವಾಗಲಿರುವುದರಿಂದ ಒಮ್ಮತದ ನಿರ್ಧಾರದಿಂದಾಗಿ ತವರಿಗೆ ಹೋಗುತ್ತಿದ್ದೇನೆ. ತಂಡದೊಂದಿಗೆ ಮೈದಾನದಲ್ಲಿ ಮತ್ತು ಹೊರಗಡೆ ಅತ್ಯುತ್ತಮ ಅನುಭವ ನನಗೆ ದೊರಕಿದೆ. ಈ ಬಾರಿ ನನ್ನ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸುತ್ತದೆ ಎಂಬ ಬಲವಾದ ನಂಬಿಕೆ ನನ್ನಲ್ಲಿದೆ’ ಎಂದು ರಬಾಡ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next