Advertisement

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್

12:40 AM Sep 26, 2020 | Hari Prasad |

ದುಬಾಯಿ: ಚೆನ್ನೈ ಸೂಪರ್ ಕಿಂಗ್ಸ್ ಗೆ ಈ ಬಾರಿಯ ಐಪಿಎಲ್ ಲೀಗ್ ಪಂದ್ಯದಲ್ಲಿ ಸತತ ಎರಡನೇ ಸೋಲು ಎದುರಾಗಿದೆ.

Advertisement

ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಧೋನಿ ಪಡೆ 44 ರನ್ ಗಳಿಂದ ಸೋತಿದೆ.

ಡೆಲ್ಲಿ ನೀಡಿದ 176 ರನ್ ಗಳ ಗುರಿಯನ್ನು ಬೆನ್ನತ್ತುವಲ್ಲಿ ಚೆನ್ನೈ ಪಡೆ ಸಂಪೂರ್ಣವಾಗಿ ವಿಫಲವಾಯಿತು. ಆರಂಭಿಕರಾದ ಮುರಳಿ ವಿಜಯ್ (10), ಶೇನ್ ವ್ಯಾಟ್ಸನ್ (14) ಸಿಡಿಯಲು ವಿಫಲರಾದರು.

ಒನ್ ಡೌನ್ ಬ್ಯಾಟ್ಸ್ ಮನ್ ಫಾ ಡುಪ್ಲೆಸಿಸ್ ಮಾತ್ರವೇ ಹೋರಾಟದ ಛಾತಿಯನ್ನು ತೋರಿದರು. ಅವರೇ ಚೆನ್ನೈ ಸೂಪರ್ ಕಿಂಗ್ಸ್ ಪರ ಟಾಪ್ ಸ್ಕೋರರ್. ಡುಪ್ಲೆಸಿಸ್ 35 ಎಸೆತೆಗಳಿಂದ 43 ರನ್ ಬಾರಿಸಿದರು.

ಇದನ್ನೂ ಓದಿ: ಪೃಥ್ವಿ ಶಾ ಅರ್ಧ ಶತಕದಾಟ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ! 

Advertisement

ಆದರೆ ಡುಪ್ಲೆಸಿಸ್ ಅವರಿಗೆ ಯಾರಿಂದಲೂ ಸೂಕ್ತ ಬೆಂಬಲ ಸಿಗಲಿಲ್ಲ. ಗಾಯಕ್ವಾಡ್ (5), ಕೇಧಾರ್ ಜಾಧವ್ (26), ಕಪ್ತಾನ ಧೋನಿ (15), ರವೀಂದ್ರ ಜಡೇಜಾ (12) ಸೂಕ್ತ ಸಮಯದಲ್ಲಿ ಸಿಡಿಯಲು ವಿಫಲವಾಗಿದ್ದೇ ಚೆನ್ನೈ ಸೋಲಿಗೆ ಪ್ರಮುಖ ಕಾರಣವಾಯಿತು.

ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಏಳು ವಿಕೆಟ್ ಗಳಿಂದ 131 ರನ್ ಗಳಷ್ಟನ್ನೇ ಕಲೆ ಹಾಕಲು ಸಾಧ್ಯವಾಗಿ 44 ರನ್ ಗಳಿಂದ ಸೋಲೊಪ್ಪಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next