Advertisement

IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್‌

08:52 PM Sep 21, 2024 | Team Udayavani |

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್‌ ಪಂತ್‌ ಅವರನ್ನು ತನ್ನಲ್ಲೇ ಉಳಿಸಿಕೊಳ್ಳುವುದಾಗಿ ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಇದರಿಂದ ಮುಂದಿನ ಐಪಿಎಲ್‌ನಲ್ಲಿ ಪಂತ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಒಂದು ಹಂತದ ವಿರಾಮ ಲಭಿಸಿದೆ.

Advertisement

2022ರಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾದ ಬಳಿಕ ಪಂತ್‌ 2024ರ ಐಪಿಎಲ್‌ನಲ್ಲಿ ಡೆಲ್ಲಿ ಪರ ಆಡಿದ್ದರು. ಈ ವರ್ಷದ ಟಿ20 ವಿಶ್ವಕಪ್‌ನಲ್ಲೂ ಪಂತ್‌ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಮಿಂಚುತ್ತಿರುವ ಪಂತ್‌, ಮುಂದಿನ ವರ್ಷ ಐಪಿಎಲ್‌ ತಂಡ ಬದಲಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಚೆನ್ನೈ ಟೆಸ್ಟ್‌ ಪಂದ್ಯದಲ್ಲಿ ಪಂತ್‌ ಅವರ ಬ್ಯಾಟಿಂಗ್‌ ಫಾರ್ಮ್ ನೋಡಿದ ಬಳಿಕ ಡೆಲ್ಲಿ ಫ್ರಾಂಚೈಸಿ ಇವರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಬಿಸಿಸಿಐ ಇನ್ನೂ ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಪ್ರಕಟಿಸಿಲ್ಲ. ಆದರೆ ರಿಷಭ್‌ ಪಂತ್‌, ಡೆಲ್ಲಿಯಲ್ಲೇ ಉಳಿಯುವ ಆಟಗಾರರ ಯಾದಿಯ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next