Advertisement
ಅಹ್ಮದಾಬಾದ್‌ನಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಗುಜರಾತ್ 5 ವಿಕೆಟ್‌ಗಳಿಂದ ಚೆನ್ನೈಗೆ ಸೋಲುಣಿಸಿತ್ತು. ಇನ್ನೊಂದೆಡೆ ತವರಿನಂಗಳದಲ್ಲಿ ಮೊದಲ ಪಂದ್ಯವಾಡಿದ ಲಕ್ನೋ 50 ರನ್ನುಗಳಿಂದ ಡೆಲ್ಲಿಯನ್ನ ಬಗ್ಗುಬಡಿದಿತ್ತು. ಹೀಗಾಗಿ ತವರಿನ ಅಂಗಳದ ಲಾಭ ಎತ್ತಬೇಕಾದ ಒತ್ತಡ ಹಾಗೂ ಅನಿವಾರ್ಯತೆ ವಾರ್ನರ್ ಬಳಗದ ಮೇಲಿದೆ.
ಗುಜರಾತ್ ಭಾರತದ ಬ್ಯಾಟರ್‌ಗಳನ್ನೇ ನೆಚ್ಚಿಕೊಂಡಿರುವ ತಂಡ. ವೃದ್ಧಿಮಾನ್ ಸಾಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ನಾಯಕ ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ… ಹೀಗೆ ಪಟ್ಟಿ ಬೆಳೆಯುತ್ತದೆ. ಚೆನ್ನೈ ವಿರುದ್ಧ 179 ರನ್ ಚೇಸ್ ಮಾಡುವ ವೇಳೆ ಗಿಲ್, ಸಾಹಾ, ವಿಜಯ್ ಶಂಕರ್ ಅವರೆಲ್ಲ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪಾಂಡ್ಯ ಮಾತ್ರ ಕ್ಲಿಕ್ ಆಗಿರಲಿಲ್ಲ. ಆದರೂ ತಂಡದ ಬ್ಯಾಟಿಂಗ್ ಶಕ್ತಿಯ ಬಗ್ಗೆ ಅನುಮಾನವಿಲ್ಲ. ಬೌಲಿಂಗ್‌ನಲ್ಲಿ ಶಮಿ, ರಶೀದ್ ಖಾನ್, ಅಲ್ಜಾರಿ ಜೋಸೆಫ್ ಹಾಗೂ ಸ್ವತಃ ಪಾಂಡ್ಯ ಘಾತಕ ದಾಳಿ ಸಂಘಟಿಸಬಲ್ಲರು.
Related Articles
ಲಕ್ನೋ ವಿರುದ್ಧ ಡೆಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆ ರಡರಲ್ಲೂ ವೈಫಲ್ಯ ಕಂಡಿತ್ತು. “ಆಲ್ ಇಂಡಿಯನ್ ಬೌಲಿಂಗ್’ನಲ್ಲಿ ಖಲೀಲ್ ಅಹ್ಮದ್, ಕುಲ್ದೀಪ್ ಯಾದವ್ ಮಾತ್ರ ಕ್ಲಿಕ್ ಆಗಿದ್ದರು. ಮುಕೇಶ್ ಕುಮಾರ್ ವಿಕೆಟ್‌ಲೆಸ್ ಎನಿಸಿದ್ದರು. ಚೇತನ್ ಸಕಾರಿಯಾ 2 ವಿಕೆಟ್ ಉರುಳಿಸಿದರೂ 53 ರನ್ ಬಿಟ್ಟುಕೊಟ್ಟಿದ್ದರು. ಈ ಬಾರಿ ಬಾಂಗ್ಲಾದ ಅನುಭವಿ ವೇಗಿ ಮುಸ್ತಫಿಜುರ್ ರೆಹಮಾನ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ತಂಡದ ವೇಗಿಗಳಾದ ಆ್ಯನ್ರಿಚ್ ನೋರ್ಜೆ, ಲುಂಗಿ ಎನ್‌ಗಿಡಿ ಆಗಮನ ವಿಳಂಬವಾಗಿರುವುದೂ ಡೆಲ್ಲಿಗೆ ಸಮಸ್ಯೆಯಾಗಿ ಕಾಡಿದೆ.
Advertisement
ಇಬ್ಬರು ಸಿಡಿದರೂ ಸಾಕುಡೆಲ್ಲಿ ನಾಯಕ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಅನುಮಾನವಿತ್ತು. ಆದರೆ ಲಕ್ನೋ ವಿರುದ್ಧ ವಾರ್ನರ್ ಹೊರತುಪಡಿಸಿ ಉಳಿದವರೆಲ್ಲ ವಿಫಲರಾದದ್ದೊಂದು ವಿಪರ್ಯಾಸ. ವಾರ್ನರ್ ಏಕಾಂಗಿ ಹೋರಾಟ ನಡೆಸಿ 56 ರನ್ ಹೊಡೆದಿದ್ದರು. ಉಳಿದಂತೆ ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸಫìರಾಜ್ ಖಾನ್, ರೋವ¾ನ್ ಪೊವೆಲ್ ಅವರ ಘೋರ ವೈಫಲ್ಯ ಡೆಲ್ಲಿಯನ್ನು ಸೋಲಿನ ಸುಳಿಗೆ ತಳ್ಳಿತ್ತು. ಬಹುತೇಕ ಮಂದಿ ಮಾರ್ಕ್ ವುಡ್ ಎಸೆತಗಳಿಗೆ ಮಂಕಾಗಿದ್ದರು. ಆದರೆ ಇವರಲ್ಲಿ ಇಬ್ಬರು ತಮ್ಮ ನೈಜ ಪರಾಕ್ರಮ ತೋರಿದರೂ ಡೆಲ್ಲಿಯನ್ನು ತಡೆಯುವುದು ಕಷ್ಟವಾಗಲಿದೆ ಎಂಬುದು ಮಾತ್ರ ವಾಸ್ತವ. ಡೇವಿಡ್ ಮಿಲ್ಲರ್ ಆಗಮನ
ಮೊದಲ ಪಂದ್ಯದಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾದ ಹಾರ್ಡ್ ಹಿಟ್ಟಿಂಗ್ ಬ್ಯಾಟರ್ ಡೇವಿಡ್ ಮಿಲ್ಲರ್ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದ ಕೇನ್ ವಿಲಿಯಮ್ಸನ್ ಜಾಗಕ್ಕೆ ಸಮರ್ಥ ಬದಲಿ ಆಟಗಾರನೋರ್ವ ಲಭಿಸಿದಂತಾಗಿದೆ. ಮಿಲ್ಲರ್ ಕಳೆದ ಋತುವಿನಲ್ಲಿ 449 ರನ್ ಪೇರಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಟೈಟಾನ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಮಿಲ್ಲರ್ ವಹಿಸಿದ ಪಾತ್ರವನ್ನು ಮರೆಯುವಂತಿಲ್ಲ. “ಅಹ್ಮದಾಬಾದ್‌ನಲ್ಲಿ ಆಡುವುದು ಒಂದು ವಿಶೇಷ ಅನುಭವ. ಅದರಲ್ಲೂ ಚೆನ್ನೈ ವಿರುದ್ಧದ ಆರಂಭಿಕ ಪಂದ್ಯವಾಡುವುದು ಇದಕ್ಕೂ ಮಿಗಿಲಾದ ಅನುಭವ ನೀಡುತ್ತಿತ್ತು. ಆದರೆ ನನಗೆ ಈ ಅವಕಾಶ ಲಭಿಸದಿರುವುದರಿಂದ ತುಸು ನಿರಾಸೆಯಾದದ್ದು ಸಹಜ. ನಾವೆಲ್ಲ ನೆದರ್ಲೆಂಡ್ಸ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡಿದ್ದೆವು’ ಎಂಬುದಾಗಿ ಮಿಲ್ಲರ್ ಹೇಳಿದರು. ಈ ಐಪಿಎಲ್ ದಕ್ಷಿಣ ಆಫ್ರಿಕಾದ ಬಹಳಷ್ಟು ಆಟಗಾರರಿಂದ ತುಂಬಿದೆ. ಸನ್‌ರೈಸರ್ ಹೈದರಾಬಾದ್ ತಂಡದ ನಾಯಕ ಐಡನ್ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಜಾನ್ಸೆನ್; ಡೆಲ್ಲಿ ತಂಡದ ಲುಂಗಿ ಎನ್‌ಗಿಡಿ, ಆ್ಯನ್ರಿಚ್ ನೋರ್ಜೆ; ಮುಂಬೈ ತಂಡದ ಟ್ರಿಸ್ಟನ್ ಸ್ಟಬ್ಸ್, ಡಿವಾಲ್ಡ್ ಬ್ರೇವಿಸ್; ಲಕ್ನೋ ತಂಡದ ಕ್ವಿಂಟನ್ ಡಿ ಕಾಕ್, ಪಂಜಾಬ್‌ನ ಕಾಗಿಸೊ ರಬಾಡ ಇವರಲ್ಲಿ ಪ್ರಮುಖರು. ಇವರೆಲ್ಲ ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.