Advertisement

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ಸೇರ್ಪಡೆ

07:55 PM Oct 27, 2021 | Team Udayavani |

ನವದೆಹಲಿ: ಈ ವರ್ಷದ ಆರಂಭದಲ್ಲಿ ದೆಹಲಿ ಸರ್ಕಾರ ಜಾರಿಗೊಳಿಸಿದ್ದ “ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನಾ’ ಕಾರ್ಯಕ್ರಮದಡಿ ಪಟ್ಟಿ ಮಾಡಲಾಗಿದ್ದ ಪುಣ್ಯಕ್ಷೇತ್ರಗಳಲ್ಲಿ ಅಯೋಧ್ಯೆಯನ್ನು ಹೊಸತಾಗಿ ಸೇರ್ಪಡೆಗೊಳಿಸಲಾಗಿದೆ.

Advertisement

ಈ ಕುರಿತ ಪ್ರಸ್ತಾವನೆಗೆ ಬುಧವಾರ ನಡೆದ ದೆಹಲಿ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಆ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವಿಶ್ಲೇಷಣೆ ನಡೆದಿದೆ.

ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಅಯೋಧ್ಯೆಗೆ ತೆರಳಿ, ರಾಮಜನ್ಮಭೂಮಿಯಲ್ಲಿರುವ ರಾಮಲಲ್ಲಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

ಇದನ್ನೂ ಓದಿ:ಸಹಕಾರ ಕ್ಷೇತ್ರದಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ. ರಾಜಸ್ವ ಸಂಗ್ರಹ

Advertisement

ಈ ಯೋಜನೆಯಡಿ ಆಯ್ಕೆಯಾಗುವ ಪ್ರಯಾಣಿಕರು, ಸರ್ಕಾರದಿಂದ ಪಟ್ಟಿ ಮಾಡಲಾಗಿರುವ ಪುಣ್ಯಕ್ಷೇತ್ರಗಳಿಗೆ ಹೋಗಿ ಬರಲು ಬೇಕಾದ ಖರ್ಚುಗಳನ್ನು (ಸಾರಿಗೆ, ಎ.ಸಿ. ಹೋಟೆಲ್‌ಗ‌ಳಲ್ಲಿ ವಾಸ್ತವ್ಯ, ಆಹಾರ) ದೆಹಲಿ ಸರ್ಕಾರವೇ ವಹಿಸಿಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next