ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ 19 ಸೋಂಕು ಇಳಿಮುಖವಾದ ಹಿನ್ನೆಲೆಯಲ್ಲಿ ಕೋವಿಡ್ ನಿರ್ಬಂಧ ಸಡಿಲಿಕೆ ಮಾಡುತ್ತಿರುವ ನಿಟ್ಟಿನಲ್ಲಿ ಜೂನ್ 21ರಿಂದ ಎರಡು ಗಂಟೆಗಳ ಕಾಲ ಬಾರ್, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ:ಮಂಗಳೂರು : ನಿಯಮ ಮೀರಿ 4 ಜೋಡಿಗಳ ಮದುವೆ; ಅಧಿಕಾರಿಗಳ ದಾಳಿ
ಸೋಮವಾರದಿಂದ ಸಾರ್ವಜನಿಕ ಪಾರ್ಕ್ಸ್, ಗಾರ್ಡನ್ಸ್, ಗಾಲ್ಫ್ ಕ್ಲಬ್ ಮತ್ತು ಯೋಗ ತರಗತಿ ನಡೆಸಲು ಅನುಮತಿ ನೀಡಲಾಗುವುದು ಎಂದು ಹೇಳಿದೆ. ಬಾರ್ ಗಳು ರಾತ್ರಿ 10ರಿಂದ ಶೇ.50ರಷ್ಟು ಗ್ರಾಹಕರ ಸಾಮರ್ಥ್ಯದೊಂದಿಗೆ ತೆರೆಯಲು ಅವಕಾಶ ಕಲ್ಲಿಸಲಾಗಿದೆ. ರೆಸ್ಟೋರೆಂಟ್ ಗಳು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
ತ್ವರಿತಗತಿಯ ಕೋವಿಡ್ ಲಾಕ್ ಡೌನ್ ತೆರವುಗೊಳಿಸುವ ಬಗ್ಗೆ ವೈದ್ಯರು ಮತ್ತು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿರುವ ನಡುವೆಯೇ ಈ ನೂತನ ಸಡಿಲಿಕೆ ಘೋಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಭಾರತ ಶೀಘ್ರದಲ್ಲಿಯೇ ಕೋವಿಡ್ 3ನೇ ಅಲೆಯನ್ನು ಎದುರಿಸಲಿದೆ. ಭಾರತದಲ್ಲಿ 6ರಿಂದ ಎಂಟು ವಾರಗಳೊಳಗೆ ಕೋವಿಡ್ ಮೂರನೇ ಅಲೆ ಆರಂಭವಾಗಲಿದೆ ಎಂದು ದೆಹಲಿ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.