ನವದೆಹಲಿ: ಮುಂದಿನ ವರ್ಷದ ಜನವರಿ 1ರವರೆಗೆ ಪಟಾಕಿ ಮಾರಾಟ, ಆನ್ ಲೈನ್ ಮಾರಾಟ ಮತ್ತು ಪಟಾಕಿ ಸರಬರಾಜನ್ನು ನಿಷೇಧಿಸಿದೆ. ಅಷ್ಟೇ ಅಲ್ಲ ಪಟಾಕಿ ಉತ್ಪಾದನೆ, ಸಂಗ್ರಹ ಮತ್ತು ಎಲ್ಲಾ ರೀತಿಯ ಪಟಾಕಿ ಮಾರಾಟ ನಿಷೇಧಿಸಲಾಗಿದೆ ಎಂದು ದೆಹಲಿ ಪರಿಸರ ಖಾತೆ ಸಚಿವರ ಗೋಪಾಲ್ ರಾಯ್ ತಿಳಿಸಿದ್ದಾರೆ.
ಇದನ್ನೂ ಓದಿ:ಕೂಡಲೇ ಶ್ವೇತಪತ್ರ ಹೊರಡಿಸಿ: ಸಚಿವ ಸುನಿಲ್ ಕುಮಾರ್ ರಿಗೆ ಸಿದ್ದರಾಮಯ್ಯ ಸವಾಲು
ಪಟಾಕಿ ಮಾರಾಟ ನಿಷೇಧದ ಆದೇಶವನ್ನು ಯಾರೇ ಉಲ್ಲಂಘಿಸಿದರು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಯ್ ಹೇಳಿದರು. ಅಪಾಯಕಾರಿ ಮಾಲಿನ್ಯದಿಂದ ದೆಹಲಿ ಜನರನ್ನು ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಇಡೀ ದೆಹಲಿಯ ಪರಿಸರ ಕಲುಷಿತಗೊಳ್ಳದಂತೆ ನಾವು ಎಚ್ಚರ ವಹಿಸಬೇಕಾಗಿದೆ. ಆ ನಿಟ್ಟಿನಲ್ಲಿ ಪಟಾಕಿ ತಯಾರಿಕೆ, ಸಂಗ್ರಹ ಮತ್ತು ಎಲ್ಲಾ ವಿಧದ ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಬಾರಿ ದೆಹಲಿಯಲ್ಲಿ ಪಟಾಕಿ ಆನ್ ಲೈನ್ ಮಾರಾಟ ಮತ್ತು ಸರಬರಾಜನ್ನು ಕೂಡಾ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ 2023ರ ಜನವರಿ 1ರವರೆಗೆ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.