Advertisement

Pollution ದಿಲ್ಲಿಯಲ್ಲಿ ಆ್ಯಪ್‌ ಟ್ಯಾಕ್ಸಿಗಳಿಗೆ ನಿಷೇಧ: ಬೆಸ-ಸಮ ಸಂಚಾರ ನಿಯಮ ಮುಂದೂಡಿಕೆ

08:29 PM Nov 08, 2023 | Team Udayavani |

ನವದೆಹಲಿ: ದೆಹಲಿ ರಾಜ್ಯ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ ಪ್ರದೇಶದಲ್ಲಿ ವಾಯು ಗುಣಮಟ್ಟ (ಎಕ್ಯೂಐ) ಬುಧವಾರ ಮತ್ತೆ ನಿಯಂತ್ರಿತ ಮಟ್ಟ ಮೀರಿದೆ.

Advertisement

ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 426ಕ್ಕೆ ಏರಿಕೆಯಾಗಿದೆ. ಮಂಗಳವಾರ ಈ ಪ್ರಮಾಣ 395 ಆಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ದೆಹಲಿ ಸರ್ಕಾರ ಇತರ ರಾಜ್ಯಗಳಿಂದ ನವದೆಹಲಿಗೆ ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಪ್ರವೇಶ ನಿಷೇಧಿಸಿದೆ ಎಂದು ಪರಿಸರ ಸಚಿವ ಗೋಪಾಲ್‌ ರಾಯ್‌ ಹೇಳಿದ್ದಾರೆ.

ಇದಲ್ಲದೆ, ಬಹು ನಿರೀಕ್ಷಿತ ಬೆಸ-ಸಮ ಸಂಖ್ಯೆಗಳ ವಾಹನ ಸಂಚಾರ ನಿಯಮ ಜಾರಿಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿಯೂ ಅವರು ಹೇಳಿದ್ದಾರೆ. ಶುಕ್ರವಾರ ವಾಯು ಗುಣಮಟ್ಟದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಆ ಸಂದರ್ಭದಲ್ಲಿ ನ್ಯಾಯಪೀಠ ಬೆಸ-ಸಮ ನಿಯಮ ಜಾರಿಯ ಬಗ್ಗೆ ಏನು ಸೂಚಿಸುತ್ತದೆಯೋ ಅದನ್ನು ಅನುಷ್ಠಾನ ಮಾಡಲಾಗುತ್ತದೆ. ನಿಯಮದ ಬಗ್ಗೆ ಹಾರ್ವರ್ಡ್‌ ಮತ್ತು ಷಿಚಾಗೋ ವಿವಿಗಳು ನಡೆಸಿದ ಎರಡು ಪ್ರತ್ಯೇಕ ಅಧ್ಯಯನಗಳನ್ನೂ ನ್ಯಾಯಪೀಠದ ಮುಂದೆ ಸಲ್ಲಿಸಲಾಗುತ್ತದೆ ಎಂದರು.

ಇಂದಿನಿಂದ ರಜೆ:
ವಾಯು ಮಾಲಿನ್ಯ ಕುಸಿತದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಶಾಲೆಗಳಿಗೆ ನೀಡಬೇಕಾಗಿದ್ದ ಚಳಿಗಾಲದ ರಜೆಯನ್ನು ನ.9ರಿಂದ ನ.18ರ ವರೆಗೆ ನೀಡಲು ದೆಹಲಿ ಸರ್ಕಾರ ತೀರ್ಮಾನಿಸಿದೆ. ಇದೇ ವೇಳೆ, ಹರ್ಯಾಣದ ಹಿಸ್ಸಾರ್‌ ಜಿಲ್ಲಾಡಳಿತ ತಾಜ್ಯ, ನಿರುಪಯುಕ್ತ ವಸ್ತುಗಳನ್ನು ಸುಡುವುದರ ವಿರುದ್ಧ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಬಂಗಾಳಕೊಲ್ಲಿಯ ವರೆಗೆ…
ವಾಯು ಗುಣಮಟ್ಟದ ಆತಂಕದ ನಡುವೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನಾಸಾ ನೀಡಿದ ಹೊಸ ಫೋಟೋ ಮಾಹಿತಿಯ ಅನ್ವಯ ಪಾಕಿಸ್ತಾನದಿಂದ ಬಂಗಾಳದ ವರೆಗಿನ ಪ್ರದೇಶಗಳು ಸ್ಮಾಗ್‌ (ಹೊಗೆ ಮತ್ತು ಧೂಳು) ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next