Advertisement

ದೆಹಲಿ ಆಟೋ ಎಕ್ಸ್‌ಪೋ: ದುಬಾರಿ ಬೈಕ್‌ಗಳ ಅನಾವರಣ

11:51 AM Feb 10, 2018 | Sharanya Alva |

ನವದೆಹಲಿ: ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿರುವ ಆಟೋ ಎಕ್ಸ್‌ಪೋದ ಮೂರನೇ ದಿನವಾದ ಶುಕ್ರವಾರವೂ ಕಾರು, ಬೈಕ್‌, ಸ್ಕೂಟರ್‌ಗಳ ಹೊಸ ವೇರಿಯಂಟ್‌ಗಳು ಬಿಡುಗಡೆಯಾಗಿವೆ.

Advertisement

ವೈಝಡ್‌ಎಫ್ ಆರ್‌3: ಯಮಹಾ ಮೋಟರ್ 321ಸಿಸಿ ಸಾಮರ್ಥ್ಯದ ವೈಝಡ್‌ಎಫ್ ಆರ್‌3 ಬೈಕ್‌ ಅನಾವರಣಗೊಳಿಸಿದೆ. ಬಾಲಿವುಡ್‌ ನಟ ಜಾನ್‌ ಅಬ್ರಾಹಂ ಅನಾವರಣಗೊಳಿಸಿದ್ದಾರೆ. ಎಕ್ಸ್‌ ಶೋ ರೂಂ ಬೆಲೆ: 3.48 ಲಕ್ಷ ರೂ.

ಎಫ್750 ಜಿಎಸ್‌, ಎಫ್850 ಜಿಎಸ್‌:
ಬಿಎಂಡಬ್ಲ್ಯು ಬಹುನಿರೀಕ್ಷಿತ ಎರಡು ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಎಕ್ಸ್‌ ಶೋ ರೂಂ ಬೆಲೆ ಕ್ರಮವಾಗಿ: 12.20 ಲಕ್ಷ ರೂ. ಮತ್ತು 13.70 ಲಕ್ಷ ರೂ.

ಬಿಎಂಡಬ್ಲ್ಯು ಆರ್ಟ್‌ ಕಾರ್‌
ಬಿಎಂಡಬ್ಲ್ಯು ತನ್ನ 17ನೇ ಆರ್ಟ್‌ ಕಾರನ್ನು ಶುಕ್ರವಾರ ಅನಾವರಣಗೊಳಿಸಿತು. ವಿಶೇಷ ವರ್ಣ ಸಂಯೋಜನೆಯಲ್ಲಿ ಅಮೆರಿಕದ ಕಲಾವಿದ ಜೆಫ್ ಕೂನ್ಸ್‌  ಸಿದ್ಧಗೊಳಿಸಿದ್ದಾರೆ. ಎಂ3 ಜಿಟಿ2 ವೇರಿಯಂಟ್‌ ಸೆಡಾನ್‌ ಕಾರನ್ನು ಇದಕ್ಕೆ ಉಪಯೋಗಿಸಿಕೊಂಡಿದ್ದಾರೆ. ಈ ಕಾರನ್ನು ಇಂಡಿಯಾ ಆರ್ಟ್‌ ಫೇರ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next