Advertisement

24 ಗಂಟೆ ವಿದ್ಯುತ್,ನೀರು:10 ಅಂಶಗಳ ‘ಕೇಜ್ರಿವಾಲ್ ಗ್ಯಾರಂಟಿ ಕಾರ್ಡ್’ಘೋಷಿಸಿದ ದೆಹಲಿ ಸಿಎಂ

09:57 AM Jan 20, 2020 | Team Udayavani |

ನವದೆಹಲಿ: ದೆಹಲಿ ವಿಧಾನಸಭೆ  ಚುನಾವಣೆ ಹಿನ್ನಲೆಯಲ್ಲಿ  ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ 10 ಅಂಶಗಳ  ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಕೇಜ್ರಿವಾಲ್ ಗ್ಯಾರಂಟಿ ಕಾರ್ಡ್ ಎಂದೇ ಹೆಸರಿಸಿದ್ದಾರೆ.

Advertisement

ಈ ಪ್ರಣಾಳಿಕೆಯಲ್ಲಿ ಆಪ್ ಪಕ್ಷ ಗೆಲುವು ಸಾಧಿಸಿದರೆ ಮುಂದಿನ 5 ವರ್ಷಗಳ ಯೋಜನೆಗಳ ಪಟ್ಟಿಯನ್ನು ನಮೂದಿಸಲಾಗಿದೆ. ಪ್ರಮುಖವಾಗಿ 24 ಗಂಟೆ ಕುಡಿಯುವ ನೀರಿನ ಸೌಲಭ್ಯ, ದೆಹಲಿಯಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೂ ಶಿಕ್ಷಣದ ಸೌಲಭ್ಯ, ಪರಿಸರ ಸ್ವಚ್ಚತೆ, ಯಮುನಾ ನದಿ ಸ್ವಚ್ಚತೆ , ಕೊಳೆಗರಿಯ(ಸ್ಲಂ) ನಿವಾಸಿಗಳಿಗೆ ಮನೆ ಮುಂತಾದ ಹಲವು ಅಂಶಗಳನ್ನು ಘೋಷಿಸಿದ್ದಾರೆ.

ಮಾತ್ರವಲ್ಲದೆ ಎಲ್ಲಾ ಕುಟುಂಬಗಳಿಗೆ ಉಚಿತಾ ಚಿಕಿತ್ಸಾ ಸೌಲಭ್ಯ, ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ಮುಂದಿನ ಐದು ವರ್ಷಗಳಿಗೆ ಅನುಕೂಲ ಮಾಡಿಕೊಡಲಾಗುವುದು, ಪರಿಸರದ ಸ್ವಚ್ಛತೆಗಾಗಿ 2 ಕೋಟಿ ಮರಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮೊಹಲ್ಲಾ ಮಾರ್ಷಲ್ ಎಂಬ ವಿನೂತನ ಯೋಜನೆ ಜಾರಿಗೆ ತೆರಲಾಗುವುದು. ಪ್ರತಿ ರಸ್ತೆಯಲ್ಲೂ ಸಿಸಿಟಿವಿ ಅಳವಡಿಕೆ  ಮಾಡಲಾಗುವುದು. ಮುಂದಿನ 10 ದಿನಗಳಲ್ಲಿ ಸಂಪೂರ್ಣ ಪ್ರಣಾಳಿಕೆಯನ್ನು ಘೋಷಿಸಿಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next