Advertisement

ಕನಿಷ್ಠಕ್ಕೆ ತಲುಪಿದ ದೆಹಲಿ ವಾಯು ಗುಣಮಟ್ಟ

09:21 PM Oct 23, 2022 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ವಾಯು ಗುಣಮಟ್ಟ ಪ್ರಮಾಣ ಸೂಚ್ಯಂಕ 265ರಷ್ಟಿತ್ತು. ಸೋಮವಾರದಿಂದ ದೀಪಾವಳಿ ಹಬ್ಬವಿರುವುದರಿಂದಾಗಿ ಈ ಸೂಚ್ಯಂಕ ಇನ್ನಷ್ಟು ಕುಸಿದು, ಗುಣಮಟ್ಟ ಹದಗೆಡುವ ಸಾಧ್ಯತೆಯಿದೆ.

Advertisement

ಕಳೆದ ವರ್ಷ ದೀಪಾವಳಿ ಹಿಂದಿನ ದಿನದಂದು(ನ.3) ನಗರದಲ್ಲಿ ವಾಯು ಗುಣಮಟ್ಟದ ಸೂಚ್ಯಂಕ 314 ಇತ್ತು. ಅದು ಹಬ್ಬದ ದಿನದಂದು 382ಕ್ಕೆ ಹಾಗೂ ಅದರ ನಂತರದ ದಿನದಂದು 414ಕ್ಕೆ ಕುಸಿದಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

ವಾಯು ಗುಣಮಟ್ಟ ಸೂಚ್ಯಂಕ 50ರ ಒಳಗಿದ್ದರೆ ಉತ್ತಮವೆಂದು ಹಾಗೂ 200ರ ಮೇಲಿದ್ದರೆ ಅಪಾಯಕಾರಿ ಎಂದು ಪರಿಗಣಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next