Advertisement

Delhi; ಆರನೇ ತರಗತಿ ವಿದ್ಯಾರ್ಥಿಯೊಂದಿಗೆ ಜಗಳವಾಡಿದ್ದ 14 ವರ್ಷದ ಬಾಲಕ ಸಾವು

09:26 AM Feb 25, 2024 | Team Udayavani |

ಹೊಸದಿಲ್ಲಿ: ಆರನೇ ತರಗತಿಯ ವಿದ್ಯಾರ್ಥಿಯ ಜತೆಗೆ ಜಗಳವಾಡಿದ್ದ 14 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಘಟನೆಯು ಶುಕ್ರವಾರ ಶಾಲೆಯ ಹೊರಗಡೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

14 ಮತ್ತು 12 ವರ್ಷದ ಇಬ್ಬರು ಬಾಲಕರು ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದಾರೆ. 12 ವರ್ಷದ ಆರೋಪಿ ಬಾಲಕನು ಮತ್ತೋರ್ವನಿಗೆ ಗುದ್ದಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತು. ಹಿರಿಯ ಹುಡುಗನಿಗೆ ತೀವ್ರವಾಗಿ ಗಾಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹೊಡೆದಾಟದ ವೇಳೆ ಸಂತ್ರಸ್ತನ ತಲೆ, ಮುಖ, ಎಡಗೈಗೆ ಗಾಯಗಳಾಗಿವೆ.

ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಹುಡುಗನು ತನ್ನ ಗಾಯಗಳಿಂದ ಅತಿಯಾದ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿ ಶುಕ್ರವಾರ ಸಂಜೆ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Advertisement

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next