Advertisement

ದೆಹಲಿ ಅಗ್ನಿ ದುರಂತ: 29 ಮಂದಿ ನಾಪತ್ತೆ; ಕಟ್ಟಡದ ಅವಶೇಷಗಳಲ್ಲಿ ಶೋಧ ಕಾರ್ಯ

07:03 PM May 14, 2022 | Team Udayavani |

ನವದೆಹಲಿ: ದೆಹಲಿಯ ಹೊರವಲಯದ ಮುಂಡ್ಕಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೇರಿದ್ದು, ಇನ್ನೂ 29 ಮಂದಿ ನಾಪತ್ತೆಯಾಗಿದ್ದಾರೆ.

Advertisement

4 ಮಹಡಿಯ ಕಟ್ಟಡದಲ್ಲಿ ಶನಿವಾರವೂ ಅಗ್ನಿ ಶಾಮಕ ದಳ ಶೋಧ ಕಾರ್ಯ ನಡೆಸಿದ್ದು, ಎಲ್ಲ ವಸ್ತುಗಳೂ ಸುಟ್ಟು ಕರಕಲಾಗಿರುವ ಕಾರಣ ಯಾವುದನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ, ನಾಪತ್ತೆಯಾದವರ ಪೈಕಿ ಕೆಲವರು ಕಟ್ಟಡದೊಳಗೇ ಸಜೀವ ದಹನವಾಗಿರುವ ಸಾಧ್ಯತೆಯಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಮಹಡಿಯಿರುವ ಕಟ್ಟಡವಾಗಿದ್ದರೂ, ಅದಕ್ಕೆ ಒಂದೇ ಆಗಮನ ಮತ್ತು ನಿರ್ಗಮನ ದ್ವಾರವಿದ್ದದ್ದೇ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಉಂಟಾದ ಸ್ಫೋಟದಿಂದ ಈ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

Advertisement

10 ಲಕ್ಷ ರೂ. ಪರಿಹಾರ:
ದೆಹಲಿ ಸಿಎಂ ಕೇಜ್ರಿವಾಲ್‌, ಡಿಸಿಎಂ ಮನೀಶ್‌ ಸಿಸೋಡಿಯಾ ಅವರು ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಅಮೃತಸರ ಆಸ್ಪತ್ರೆಯಲ್ಲೂ ದುರಂತ
ದೆಹಲಿಯ ಬೆನ್ನಲ್ಲೇ ಶನಿವಾರ ಪಂಜಾಬ್‌ನ ಅಮೃತಸರದ ಗುರುನಾನಕ್‌ ದೇವ್‌ ಆಸ್ಪತ್ರೆಯಲ್ಲೂ ಬೆಂಕಿ ದುರಂತ ಸಂಭವಿಸಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ 8 ವಾಹನಗಳು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿವೆ. ಎಲ್ಲ ರೋಗಿಗಳನ್ನೂ ಸ್ಥಳಾಂತರಿಸಲಾಗಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

ಬೆಂಕಿಗೆ 20 ಹಸು ಸಜೀವ ದಹನ
ರಾಷ್ಟ್ರ ರಾಜಧಾನಿ ಪ್ರದೇಶದ ರೋಶಿಣಿ ನಗರದ ಸಮೀಪದಲ್ಲಿರುವ ಸಾವಾª ಗ್ರಾಮದಲ್ಲಿ ಶನಿವಾರ ಹೈನುಗಾರಿಕೆ ಕೇಂದ್ರ ಒಂದರಲ್ಲಿ ಬೆಂಕಿ ಬಿದ್ದಿದೆ. ಘಟನೆಯಲ್ಲಿ 20 ಹಸುಗಳು ಸಜೀವ ದಹನವಾಗಿವೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಕಳೆದ ತಿಂಗಳು ಗಾಜಿಯಾಬಾದ್‌ನ ಇಂದಿರಾಪುರದಲ್ಲಿ ಹೈನುಗಾರಿಕೆ ಕೇಂದ್ರದಲ್ಲಿ ಬೆಂಕಿ ಬಿದ್ದು, 38 ಹಸುಗಳು ಸಜೀವ ದಹನವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next