ನ್ಯೂಯಾರ್ಕ್: ಜನಪ್ರಿಯ ಮೆಸೆಂಜಿಂಗ್ ಆ್ಯಪ್ ToTok ಅನ್ನು ಗೂಗಲ್ ಮತ್ತು ಆ್ಯಪಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ. ಬಳಕೆದಾರರ ಮೇಲೆ ಬೇಹುಗಾರಿಕೆ ಮತ್ತು ಖಾಸಗಿ ಮಾಹಿತಿಗಳನ್ನು ದುರುಪಯೋಗ ಮಾಡುತ್ತಿದ್ದ ಆರೋಪದಡಿಯಲ್ಲಿ ಈ ಆ್ಯಪ್ ಅನ್ನು ಕಿತ್ತೊಗೆಯಲಾಗಿದೆ.
ಈ ಆ್ಯಪ್ ಅನ್ನು ಕೆಲ ತಿಂಗಳ ಹಿಂದೆಯಷ್ಟೆ ಬಿಡುಗಡೆ ಮಾಡಲಾಗಿತ್ತು. ಕೆಲ ಸಮಯದಲ್ಲೆ ಮಿಲಿಯನ್ ಗಟ್ಟಲೇ ಡೌನ್ ಲೋಡ್ ಆಗಿತ್ತು. ಮಾತ್ರವಲ್ಲದೆ ಯೂರೋಪ್, ಏಷ್ಯಾ ಮತ್ತು ಉತ್ತರ ಅಮೇರಿಕಾದಲ್ಲಿ ಬಹಳ ಜನಪ್ರಿಯವಾಗಿತ್ತು.
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ , ಈ ಆ್ಯಪ್ ಬಳಕೆದಾರರ ಚಲನವಲನ , ಫೋಟೋಗಳ ಮೇಲೆ ಯುಎಇ ಸರ್ಕಾರ ನಿಗಾ ಇಡಲು ಬಳಸುತ್ತಿತ್ತು ಎನ್ನಲಾಗಿದೆ. ಹಾಗಾಗಿ ಈ ಆ್ಯಪ್ ಅನ್ನು ಗೂಗಲ್ ಹಾಗೂ ಆ್ಯಪಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದಿದೆ. ಆದರೇ ಸಂಸ್ಥೆ ToTok ನಾವು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಆದರೇ ಯಾವುದೇ ಗೌಪ್ಯ ಮಾಹಿತಿ ಗಳನ್ನು ಕದಿಯುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಈಗ ಈ ಆ್ಯಪ್ ಹಳೆ ಬಳಕೆದಾರರಿಗೆ ಲಭ್ಯವಿದ್ದು , ಆದರೆ ಹೊಸದಾಗಿ ಡೌನ್ ಲೋಡ್ ಮಾಡಲು ಸಾಧ್ಯವಿಲ್ಲ. ಗೂಗಲ್ ಮತ್ತು ಆ್ಯಪಲ್ ತಮ್ಮ ಪ್ಲೇ ಸ್ಟೋರ್ ನಲ್ಲಿ ನಕಲಿ ಆ್ಯಪ್ ಗಳು ಅಥವಾ ಬಗ್ ಗಳು ಕಂಡು ಬಂದರೆ ಕೂಡಲೇ ಡಿಲೀಟ್ ಮಾಡುತ್ತವೆ. ಅದೇ ರೀತಿ ಬಳಕೆದಾರರಿಗೆ ಸುರಕ್ಷತೆ ನೀಡುವ ನಿಟ್ಟಿನಲ್ಲಿ ToTok ಆ್ಯಪ್ ಗೂಗಲ್ ಮತ್ತು ಆ್ಯಪಲ್ ತೆಗೆದು ಹಾಕಿದೆ.