Advertisement

ಪರ್ಸೆಂಟೇಜ್‌ ಅಂಶ ಡಿಲೀಟ್‌: ದೂರು

10:48 AM Feb 20, 2021 | Team Udayavani |

ಬೆಂಗಳೂರು: ಪಾಲಿಕೆಯ ಅಧಿಕೃತ ವೆಬ್‌ ಸೈ ಟ್‌ ನಲ್ಲಿದ್ದ “ಬಿಬಿ ಎಂಪಿ ವ್ಯಾಪ್ತಿಯಲ್ಲಿ ಯಾವುದೇ ಕೆಲಸವನ್ನು ಟೆಂಡರ್‌ ಮಾಡಿದಾಗ ಅಥವಾ ಗುತ್ತಿಗೆದಾರ ರಿಂದ ಬಿಡ್‌ ಗೆದ್ದಾಗ ಆಯಾ ವಾರ್ಡ್‌ನ ಪಾಲಿಕೆ ಸದಸ್ಯ, ಶಾಸಕ ಹಾಗೂ ಬಿಬಿ ಎಂಪಿ ಕೌನ್ಸಿಲ್‌ಗೆ ಶೇಕ ಡ ವಾರು (ಬ ಹುಶಃ 20ಪ್ರತಿ ಶತ)ಪಾವ ತಿ ಸಬೇ ಕಾ ಗು ತ್ತದೆ. ಈ ಬಗ್ಗೆ ಬಿವಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಅಂಶಗಳ ಬಗ್ಗೆ ಉದಯವಾಣಿ ಗುರುವಾರ ಗಮನ ಸೆಳೆಯುವ ವರದಿ ಪ್ರಕಟಿಸಿತ್ತು.

Advertisement

ಇದರಿಂದ ಎಚ್ಚುತ್ತುಕೊಂಡಿರುವ ಬಿಬಿಎಂಪಿ ಶುಕ್ರವಾರ ಈ ಅಂಶಗಳನ್ನು ಪಾಲಿ ಕೆಯ ವೆಬ್‌ ಸೈ ಟ್‌ ನಿಂದ ತೆಗೆ ದು ಹಾ ಕಿದ್ದು, ಹಲ ಸೂರು ಗೇಟ್‌ ನ ಕೇಂದ್ರ ವಿಭಾಗದ ಸೈಬರ್‌ ಠಾಣೆಗೆ ದೂರು ನೀಡಿದೆ. ಟೆಂಡರ್‌ ಹಾಗೂ ಗುತ್ತಿ ಗೆಗೆ ಹಣ ನೀಡ ಬೇಕು, ವಾಡಿಕೆಯಂತೆ ಪಾಲಿಕೆ ಗಾರ್ಬೇಜ್‌ ಸಿಟಿ ಎನ್ನುವ ಅಂಶಗಳನ್ನು ಪಾಲಿ ಕೆಯ ಅಧಿ ಕೃತ ವೆಬ್‌ ಸೈ https://bbmp.gov.in/index.html  ನಲ್ಲಿ ಪಾಲಿಕೆ ಪ್ರಕಟಿ ಸಿತ್ತು. ಈ ಬಗ್ಗೆ “ಬಿ ಬಿಎಂಪಿಯಲ್ಲಿ ಪರ್ಸೆಂಟೇಜ್‌ ವ್ಯವ ಹಾರ ಪಕ್ಕಾ!’ ಎಂಬ ಶೀರ್ಷಿಕೆಯಡಿ ಉದಯವಾಣಿ ಶುಕ್ರವಾರ ವಿಶೇಷ ವರದಿ

ಪ್ರಕಟಿಸಿತ್ತು. ಈ ಸಂಬಂಧ ಉದಯವಾಣಿ ಜತೆ ಮಾತ ನಾ ಡಿದ ಬಿಬಿಎಂಪಿ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್‌, ಬಿಬಿಎಂಪಿಯ ಅಧಿ ಕೃತ ವೆಬ್‌ ಸೈಟ್‌ ಅನ್ನು ಕರ್ನಾಟಕ ಎಲೆಕ್ಟ್ರಾನಿಕ್‌ ಡೆವಲಪ್‌ ಮೆಂಟ್‌ ಕಾರ್ಪೊರೇಷನ್‌ ಅಭಿವೃದ್ಧಿಪಡಿಸುತ್ತಿದೆ. ಇನ್ನು ಹಲವು ಅಪ್ಲಿಕೇಶನ್‌ ಗಳು ಅಭಿವೃದ್ಧಿ ಹಂತದಲ್ಲಿ ಇದೆ. ಈ ಸಂಸ್ಥೆಯಿಂದ ಪಾಲಿಕೆಗೆ ಸಂಪೂರ್ಣವಾಗಿ ಹಸ್ತಾಂತರ ಆಗಿಲ್ಲ. ಈ ಹಂತದಲ್ಲಿ ಕೆಲವರು ಹ್ಯಾಕ್‌ ಮಾಡಿ ಈ ರೀತಿ ತಪ್ಪು ಮಾಹಿತಿ ಹಾಕಿರುವ ಸಾಧ್ಯತೆ ಇದೆ. ಈ ಸಂಬಂಧ ಪಾಲಿಕೆ ಆಂತ ರಿಕ ತನಿಖೆ ನಡೆಸಲಾಗಿದ್ದು, “ಉದ ಯ ವಾಣಿ’ ವರದಿ ಆಧ ರಿಸಿ ಸೈಬರ್‌ ಕ್ರೈಂಗೆ ದೂರು ನೀಡಲಾಗಿದೆ ಎಂದರು.

ಪಾಲಿಕೆ ಸೈಬರ್‌ ಕ್ರೈಂಗೆ ನೀಡಿ ರುವ ದೂರಿ ನಲ್ಲಿರುವ ಅಂಶ: ಪಾಲಿಕೆಯ ಅಧಿಕೃತ ವೆಬ್‌ ಸೈಟ್‌ ಅನ್ನು ಕರ್ನಾಟಕ ಎಲೆಕ್ಟ್ರಾನಿಕ್‌ ಡೆವಲಪ್‌ ಮೆಂಟ್‌ ಕಾರ್ಪೊರೇ ಷನ್‌ ಅಭಿವೃದ್ಧಿಪಡಿಸುತ್ತಿದೆ. ಪಾಲಿಕೆಯ ಅಧಿಕೃತ ಮಾಹಿ ತಿಯನ್ನು ಉಲ್ಲೇಖೀಸುವ ಬದಲು ಅವರ ಮನಸೋ ಇಚ್ಛೆ ತಪ್ಪು ಮಾಹಿತಿ ಯನ್ನು ಬರೆಯಲಾಗಿದೆ. ಇದರಿಂದ ಪಾಲಿಕೆಯ ಪ್ರತಿ ಷ್ಠಗೆ ಧಕ್ಕೆ ಆಗಿ ರು ತ್ತದೆ. ಹೀಗಾಗಿ, ಐಟಿ ಕಾಯ್ದೆ -2000ರ ಅನ್ವಯ ತನಿಖೆ ನಡೆ ಸ ಬೇಕು ಎಂದು ಪಾಲಿಕೆಯ ಐಟಿ ವಿಭಾಗ ದೂರು ನೀಡಿದೆ.

ಮಹತ್ವದ ದಾಖಲೆಗಳ ವೆಬ್‌ಸೈಟ್‌ ಗಳ ಬಗ್ಗೆ ಆತಂಕ: ಅಧಿಕೃತ ವೆಬ್‌ ಸೈಟ್‌ ನಲ್ಲಿ ಈ ಅಂಶ ಗಳು ಕಂಡು ಬಂದ ಬೆನ್ನಲ್ಲೇ ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹ ಹಾಗೂ ಕಡತ ಗಳು, ದಾಖಲ ಗಳ ಬಗ್ಗೆಯೂ ಆತಂಕ ಸೃಷ್ಟಿಯಾಗಿದೆ. ಒಂದೊಮ್ಮೆ ಯಾರಾ ದರೂ ಹ್ಯಾಕ್‌ ಮಾಡಿದ್ದರೆ, ಮುಂದಿನ ದಿನಗಳಲ್ಲಿ ಅಪಾಯ ಕಾದಿದೆ ಎನ್ನುವ ಬಗ್ಗೆಯೂ ಪಾಲಿಕೆಯ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆದಿದೆ.

Advertisement

ಪಾಲಿಕೆಯ ಐಟಿ ವಿಭಾಗದ ಅಧಿಕಾರಿ ಅಮಾನತು; ಆಯುಕ್ತ ಈ ರೀತಿ ಪಾಲಿಕೆಗೆ ಕೆಟ್ಟ ಹೆಸರು ತರುವ ಸಿಬ್ಬಂದಿಯ ಮೇಲೆ ಗಂಭೀ ರ ಕ್ರಮಕೈಗೊಳ್ಳ ಲಾಗುವುದು. ಈಗಾಗಲೇ ಈ ಮಾಹಿತಿ ನೀಡಿದವರು ಹಾಗೂ ಅದನ್ನು ಪಾಲಿ ಕೆಯ ಅಧಿ ಕೃತ ವೆಬ್‌ ಸೈಟ್‌ಗೆ ಹಾಕಿದವರ ಬಗ್ಗೆ

ಆಂತರಿಕ ತನಿಖೆ ನಡೆ ಸಿ, ಅಮಾನತು ಮಾಡಲು ಆದೇಶಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು. ಯಾವುದೇ ಮಾಹಿತಿ ದಾಖ ಲಿ ಸುವ ಮುನ್ನ ಎಚ್ಚರಿಕೆ ವಹಿಸಬೇಕು. ಯಾವುದೋ ಖಾಸಗಿ ವೆಬ್‌ ಸೈ ಟ್‌ ನಲ್ಲಿರುವ ಮಾಹಿತಿಯನ್ನು ಪಾಲಿಕೆಯ ಅಧಿಕೃತ ವೆಬ್‌ ಸೈಟ್‌ ನಲ್ಲಿ ಅಪ್‌ ಲೋಡ್‌ ಮಾಡುವುದು ಅಕ್ಷಮ್ಯ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪಾಲಿಕೆಗೆ ಕಳಂಕ ತರುವವರ ಮೇಲೆ ಕ್ರಿಮಿ ನಲ್‌ ಕೇಸ್‌ ದಾಖಲಿಸಲಾಗುವುದು ಸಂಸ್ಥೆಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದ್ದು ಮೂರು ದಿನದಲ್ಲಿ ತಪ್ಪಿಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಉದ್ದೇಶ ಪೂರ್ವಕವಾಗಿ ಸೇರಿಸಿರುವ ಶಂಕೆ :

ಪಾಲಿ ಕೆಯ ಅಧಿ ಕೃತ ವೆಬ್‌ ಸೈ ಟ್‌ ನಲ್ಲಿ “ಪಾಲಿಕೆ ಸದಸ್ಯ, ಶಾಸಕ ಹಾಗೂ ಕೌನ್ಸಿ ಲ್‌ಗೆ ಶೇ.20 ವರೆಗೆ ಪಾವ ತಿ! ‘ “ನಗರದ ರಸ್ತೆಗಳಿಗೆ ಬಿಬಿಎಂಪಿಯ ಗುತ್ತಿಗೆ ವ್ಯವಸ್ಥೆಯು ಭ್ರಷ್ಟ ಆಯೋಗದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಪಾಲಿಕೆಯು ವಾಡಿಕೆಯಂತೆ ಗಾರ್ಬೇಜ್ ಸಿಟಿ ಎಂಬ  ಅಂಶಗಳನ್ನು ಉದ್ದೇಶ ಪೂರ್ವಕವಾಗಿಯೇ ಯಾರೋ ಸೇರಿಸಿರುವ ಶಂಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next