Advertisement
ಈ ವೇಳೆ ಮಾತನಾಡಿದ ರೈತ ಮುಖಂ ಡರು, ನಾಲ್ಕನೇ ಹಂತದ ಏತ ನೀರಾವರಿ ಯೋಜನೆಯಡಿಯಲ್ಲಿ ಹನ್ನೊಂದು ಕೆರೆಗಳಿಗೆ ನೀರು ಹರಿಸಲು ಕ್ರಿಯಾ ಯೋಜನೆ ರೂಪಿಸಿದ್ದು, ಅದರಂತೆ ಯೋಜನೆಯ ವ್ಯಾಪ್ತಿಯ ಎಲ್ಲಾ ಕೆರೆ ಗಳಿಗೆ ನೀರು ಹರಿಸಲು ಸರಿಯಾದ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಂಡಿದ್ದರೆ ಇಷ್ಟೊತ್ತಿಗೆ ಯೋಜನೆ ಎಲ್ಲಾ ಕೆರೆಗಳಿಗೂ ನೀರು ಬಿಡಬಹು ದಾಗಿತ್ತು ಎಂದರು.
Related Articles
Advertisement
ಪ್ರತಿಭಟನೆಯಲ್ಲಿ ಮುಖಂಡರಾದ ನಿಜಗುಣರಾಜು, ನಾಗಶ್ರೀಪ್ರತಾಪ್, ಜಿ.ಪಂ. ಮಾಜಿ ಅಧ್ಯಕ್ಷ ಎಂ ರಾಮಚಂದ್ರ, ಯಣಗುಂಬ ಪುಟ್ಟಸ್ವಾಮಿ, ಲಿಂಗಪ್ಪ, ಯರಗನಹಳ್ಳಿ ಶಿವಕುಮಾರ್, ಮಹೇಶ್ ಸೇರಿದಂತೆ ರೈತರು ಭಾಗವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಧರಣಿಯಲ್ಲಿ ಭಾಗಿ:
ತಾಲೂಕಿನ ಅರಕಲವಾಡಿ ಕೆರೆ, ಸುವರ್ಣನಗರ ಕೆರೆಗಳಿಗೆ ಶೀಘ್ರ ಪೈಪ್ ಲೈನ್ ಅಳವಡಿಸಿ, ಹುತ್ತೂರು ಕೆರೆಯಿಂದ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಆರಂಭಿಸಿರುವ ಚಳವಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಧರಣಿಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟರ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಕಳೆದ 4 ತಿಂಗಳ ಹಿಂದೆಯೇ ಪೈಪ್ ಲೈನ್ ಕಾಮಗಾರಿ ಪೂರ್ಣ ಗೊಳ್ಳಬೇಕಾಗಿತ್ತು. ಜೂನ್ ಪೂರ್ಣವಾಗುತ್ತಿದ್ದರೂ ಪೈಪ್‌ಲೈನ್ ಕಾಮಗಾರಿ ಆರಂಭವಾಗಿಲ್ಲ. ಇನ್ನು ಈ ಕೆರೆಗಳಿಗೆ ನೀರು ಹರಿಸುವುದು ಯಾವಾಗ ಎಂದು ಪ್ರಶ್ನೆ ಮಾಡಿದರು. ಪುಟ್ಟರಂಗಶೆಟ್ಟರು ಯೋಜನೆಯನ್ನು ಜಾರಿ ಮಾಡಲು ವಿಫಲರಾಗಿರುವುದು ಬಹಿರಂಗವಾದ ಸತ್ಯವಾಗಿದೆ. ಇನ್ನಾದರೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಈ ಭಾಗದ ರೈತರು ಹಾಗು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆಯನ್ನು ತುಂಬಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.