Advertisement
ನಾರಾಯಣಪುರ ಬಲದಂಡೆ ಕಾಲುವೆಯ ಚಿಕ್ಕಹೊನ್ನಕುಣಿ ವಿಭಾಗ-4ರ ವ್ಯಾಪ್ತಿಯ ಕಾಲುವೆಗಳ ದುರಸ್ತಿ, ಜಂಗಲ್ ಕಟಿಂಗ್, ಮರಂ ಹಾಕುವುದು ಸೇರಿ 2 ಕೋಟಿ ಮೌಲ್ಯದ ಕಾಮಗಾರಿಗೆ ಟೆಂಡರ್ ಆಗಿದೆ ಎನ್ನಲಾಗಿದೆ. ಗುತ್ತಿಗೆದಾರರು ಇನ್ನೂ ಕಾಮಗಾರಿ ಆರಂಭಿಸಿಲ್ಲ.
ರೈತರಿಗೆ ತಲುಪಲ್ಲ ನೀರು: ಕಾಲುವೆಗಳ ಅಸಮರ್ಪಕ ನಿರ್ವಹಣೆ ಮತ್ತು ದುರಸ್ತಿ ಮತ್ತು ಜಂಗಲ್ ಕಟಿಂಗ್‌ನಿಂದಾಗಿ ಕಾಲುವೆಗೆ ಸಮರ್ಪಕ ನೀರು ಹರಿಸಿದರೂ 18ನೇ ಡಿಸ್ಟ್ರಿಬ್ಯೂಟರ್ ಕಾಲುವೆ ವ್ಯಾಪ್ತಿಯ ಗಬ್ಬೂರು ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಭಾಗದ ರೈತರು ಪ್ರತಿ ವರ್ಷ ಚಿಕ್ಕಹೊನ್ನಕುಣಿ ಕಚೇರಿ ಮುಂದೆ ಹೋರಾಟ ಕೈಗೊಂಡರೂ ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರುತ್ತಾರೆ ರೈತರು.
Related Articles
Advertisement
ಕಳೆದ ವರ್ಷ ಅಪೂರ್ಣ ಕಾಮಗಾರಿ: ಕಳೆದ ವರ್ಷ ನೀರು ಹರಿಸುವ ಮುನ್ನವೇ ಏಕಾಏಕಿ ಟೆಂಡರ್ ಪ್ರಕ್ರಿಯೆ ಆರಂಭಿಸಿ ತುರ್ತಾಗಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚನೆ ನೀಡಿದರು. ಇನ್ನೂ ಕಾಮಗಾರಿ ನಡೆಯುತ್ತಿರುವಾಗಲೇ ಕಾಲುವೆಗಳಿಗೆ ನೀರು ಹರಿಸಲಾಯಿತು. ಪರಿಣಾಮ ಕೋಟ್ಯಂತರ ರೂ. ಗುತ್ತಿಗೆದಾರರ ಪಾಲಾಯಿತು ಎಂದು ರೈತ ಮುಖಂಡರು ದೂರಿದ್ದಾರೆ. ಕಾಲುವೆಯಲ್ಲಿ ಜಾಲಿಗಿಡಗಳು ಬೆಳೆದು ನಿಂತಿವೆ. ಅಲ್ಲಲ್ಲಿ ನೀರು ಸಂಗ್ರಹಿಸಲು ರೈತರು ಕಲ್ಲುಗಳನ್ನು ಹಾಕಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಜಂಗಲ್ ಕಟಿಂಗ್ ಆಗದೇ ಇರುವುದರಿಂದ ರೈತರಿಗೆ ಸರಿಯಾಗಿ ನೀರು ತಲುಪುವುದಿಲ್ಲ. ಚಿಕ್ಕಹೊನ್ನಕುಣಿ ವ್ಯಾಪ್ತಿ ಕಾಲುವೆಗಳ ದುರಸ್ತಿ, ಜಂಗಲ್ ಕಟಿಂಗ್, ಮರಂ ಸೇರಿ ಇತರೆ ಕಾಮಗಾರಿ ಗುಣಮಟ್ಟದಿಂದ ನಡೆಸುವಂತೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಬೇಕು. ಅಧಿಕಾರಿಗಳು ಕಾಮಗಾರಿಯತ್ತ ನಿಗಾ ಹರಿಸಬೇಕೆಂದು ಕೆಆರ್‌ಎಸ್ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.
ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಟೆಂಡರ್ ಕರೆಯುವುದು. ಅರೆಬರೆ ಕಾಮಗಾರಿ ಮಾಡಿ ಹಣ ಲೂಟಿ ಮಾಡುವುದು ದಂಧೆಯಾಗಿದೆ. ಹೀಗಾಗಿ ರೈತರ ಜಮೀನುಗಳಿಗೆ ಸರಿಯಾಗಿ ನೀರು ತಲುಪುತ್ತಿಲ್ಲ.ಲಕ್ಷ್ಮಣ , ದೇವರಾಜ ರೈತರು ಕಾಲುವೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿಗಳ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಶ್ರೀನಿವಾಸ ಇಇ ಚಿಕ್ಕಹೊನ್ನಕುಣಿ ನಾಗರಾಜ ತೇಲ್ಕರ್