Advertisement
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ಬ್ಯಾಂಕ್ ಹಾಗೂ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬ್ಯಾಂಕ್ ಅಧಿಕಾರಿಗಳು ಮಾಡುವ ತಪ್ಪಿಗೆ ನಾವೇಕೆ ಮುಖ್ಯ ಕಾರ್ಯದರ್ಶಿಗಳ ಮುಂದೆ ತಲೆ ತಗ್ಗಿಸಬೇಕು, ನಿಮ್ಮ ಕೈಯಲ್ಲಿ ಆಗಿಲ್ಲವೆಂದರೆ ಹೇಳಿ, ಕ್ರಮಕ್ಕೆ ಶಿಫಾರಸ್ಸು ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ಅಂಚೆ ಇಲಾಖೆಯಲ್ಲಿ ಮಾಡಿಕೊಳ್ತೇವೆ: ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಎಸ್‌ಬಿಐ ತತ್ಸಾರ ತೋರುತ್ತಿದೆ. ಸಭೆಗಳಿಗೆ ಬರುವುದಿಲ್ಲ, ಮಾಹಿತಿ ಕೇಳಿದರೆ ಕೊಡುವುದಿಲ್ಲ, ಬ್ಯಾಂಕ್‌ಗೆ ಠೇವಣಿ ಬರೊದು ಇದ್ದರೆ ಊರಿಗಿಂತ ಮುಂಚೆ ಓಡಿ ಬರುತ್ತಾರೆ. ಆಗಿಲ್ಲವೆಂದು ಹೇಳಿದರೆ ಅಂಚೆ ಕಚೇರಿಯಲ್ಲಿ ಮಾಡಿಸಿಕೊಳ್ಳುತ್ತೇವೆ ಎಂದು ಹೇಳಿದರು.
ದಾಖಲೆ ಕೊಡುತ್ತಿಲ್ಲ: ಎಸ್‌ಬಿಐ ಅಧಿಕಾರಿ ಮಾತನಾಡಿ, ಕೆಲ ವಿದ್ಯಾರ್ಥಿಗಳ ಆಧಾರ್ ತಂಬು ಬರುತ್ತಿಲ್ಲ, ಇದರಿಂದ ಕೆಲ ತಾಂತ್ರಿಕ ದೋಷಗಳಿಂದ ವಿಳಂಬವಾಗುತ್ತಿದೆ. ಕೆಲ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯಿಲ್ಲದಿದ್ದರೂ ದಾಖಲೆ ಕೊಡುತ್ತಿದ್ದಾರೆ. ಆಧಾರ್ ಸಂಖ್ಯೆಗೂ ಖಾತೆಗೂ ಲಿಂಕ್ ಆಗುತ್ತಿಲ್ಲ ಎಂದರು.
ಸಬೂಬು ಹೇಳ್ತಿದ್ದಾರೆ: ಇದಕ್ಕೆ ಮಧ್ಯ ಪ್ರವೇಶ ಮಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಾಜಿ ಮಾತನಾಡಿ, ಬ್ಯಾಂಕ್ ಖಾತೆಯಿಲ್ಲದ ಮಗುವಿನ ಖಾತೆ ಮಾಡಿಸಲು ಶಿಕ್ಷಕರ ಮೂಲಕ ಪೋಷಕರಿಗೆ ತಿಳಿಸಲಾಗಿದೆ. ಯಾರು ಸುಮ್ಮನೆ ಆಧಾರ್ ಕೊಡುತ್ತಿಲ್ಲ, ಇವರಿಗೆ ಮಾಡಲು ಕೈಯಲ್ಲಿ ಆಗದಿದ್ದರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್, ನಾನು ತುಂಬ ಸಹನೆಯಿಂದ ಹೇಳಿದ್ದೇನೆ, ಆದರೂ ನೀವು ಕೆಲಸ ಮಾಡಿಲ್ಲ ಎಂದರೆ ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಮುಂದಿನ ಜು.26ರೊಳಗೆ ಕೆಲಸ ಮುಗಿಸಿಲ್ಲವೆಂದರೆ ಮುಖ್ಯ ಕಾರ್ಯದರ್ಶಿಗಳಿಗೆ ನೀವೇ ಉತ್ತರ ಕೊಡಬೇಕಾಗುತ್ತದೆ ಎಂದು ತಾಕೀತು ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ದಿನ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರಬೇಕು, ಮಕ್ಕಳ ಆಧಾರ್ ಲಿಂಕ್ ಬಗ್ಗೆ ವರದಿ ತೆಗೆದುಕೊಂಡು ಕಳುಹಿಸಬೇಕು ಎಂದು ಸೂಚಿಸಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹೊಸಮಟ್ ಉಪಸ್ಥಿತರಿದ್ದರು.