Advertisement
ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿ ಗಳಿಗೆ ನೀಡುತ್ತಿರುವ ಮಧ್ಯಾಹ್ನದೂಟಕ್ಕೆ ಅಗತ್ಯವಾದ ಹಣ ಬಿಡುಗಡೆಯಾಗದಿ ರುವುದರಿಂದ ಮಧ್ಯಾಹ್ನದೂಟದ ಜವಾ ಬ್ದಾರಿಯುಳ್ಳ ಶಾಲಾ ಮುಖ್ಯೋ ಪಾಧ್ಯಾಯರು ಸಮಸ್ಯೆಗೆ ಸಿಲುಕಿದ್ದಾರೆ. ಹಲವು ಶಾಲೆಗಳಲ್ಲಿ ಮಧ್ಯಾಹ್ನದೂಟಕ್ಕೆ ಅಗತ್ಯದ ಹಣ ಬಿಡುಗಡೆಯಾಗದೆ ಎರಡು ತಿಂಗಳಾಯಿತು. ಇಂತಹ ಸಮಸ್ಯೆ ಕಾಸರಗೋಡು ಜಿಲ್ಲೆಗೆ ಮಾತ್ರ ಸೀಮಿತವಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಪ್ರತಿ ತಿಂಗಳು ಒಂದು ಲಕ್ಷಕ್ಕೂ ಅಧಿಕ ರೂಪಾಯಿ ಅಗತ್ಯವಿರುವ ಶಾಲೆಗಳೂ ಇವೆ. ಸರಕಾರದಿಂದ ಅಕ್ಕಿ ಮಾತ್ರವೇ ಉಚಿತವಾಗಿ ಶಾಲೆಗಳಿಗೆ ಲಭಿಸುತ್ತಿದೆ. ಆದರೆ ಇತರ ಸಾಮಗ್ರಿಗಳನ್ನು ಹಣಕೊಟ್ಟು ಖರೀದಿಸಬೇಕಾಗುತ್ತದೆ. ಈ ಮೊತ್ತವನ್ನು ಸರಕಾರ ಬಿಡುಗಡೆಗೊಳಿಸುತ್ತಿದ್ದರೂ, ಇದೀಗ ಎರಡು ತಿಂಗಳಿಂದ ಮಧ್ಯಾಹ್ನದೂಟದ ವೆಚ್ಚದ ಹಣವನ್ನು ಬಿಡುಗಡೆ ಗೊಳಿಸದೆ ಮೊಟಕುಗೊಂಡಿದೆ.
Related Articles
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ತಲಾ 150 ಮಿಲಿ ಲೀಟರ್ ಹಾಲು, ಒಂದು ದಿನ ಮೊಟ್ಟೆ, ಎಲ್ಲ ಅಧ್ಯಯನ ದಿನಗಳಲ್ಲಿ ಊಟ, ಎರಡು ರೀತಿಯ ಖಾದ್ಯ ನೀಡಬೇಕು. ಈ ಪೈಕಿ ಮಧ್ಯಾಹ್ನದೂಟಕ್ಕೆ ಅಗತ್ಯವಾದ ಅಕ್ಕಿ ಸರಕಾರದಿಂದ ಉಚಿತವಾಗಿ ಲಭಿಸುತ್ತದೆ. ಅಡುಗೆ ಅನಿಲ, ಹಾಲು, ಮೊಟ್ಟೆ, ತರಕಾರಿಗಾಗಿ ಒಬ್ಬ ವಿದ್ಯಾರ್ಥಿಗೆ 6 ರಿಂದ 8 ರೂ. ಯಂತೆ ಪ್ರತಿದಿನ ಸರಕಾರ ಮೊತ್ತ ಮಂಜೂರು ಮಾಡುತ್ತದೆ.
Advertisement
ಹಣ ಇದೆ, ಬಿಡುಗಡೆಗೆ ವಿಳಂಬಶಾಲೆಗಳಿಗೆ ಬ್ಯಾಂಕ್ ಅಕೌಂಟ್‌ಗಳಿಂದ ಅಗತ್ಯದ ಮೊತ್ತವನ್ನು ನೇರವಾಗಿ ಹಿಂಪಡೆಯುವ ವ್ಯವಸ್ಥೆಯನ್ನು ಟ್ರೆಶರಿ (ಖಜಾನೆ)ಗೆ ಬದಲಾಯಿಸಿದ್ದರಿಂದ ಹಣ ಲಭಿಸಲು ವಿಳಂಬವಾಗಲಿದೆ. ಇನ್ನು ಮುಂದೆ ಎಲ್ಲ ಬಿಲ್‌ಗಳು ನೂತನ ಸಾಫ್ಟ್ ವೇರ್ “ಬಿಂಸ್’ ಅಕೌಂಟ್ ಮೂಲಕವೇ ಸಾಧ್ಯವಾಗುವುದು. ಆಯಾಯ ಶಾಲೆಗಳು ಎ.ಇ.ಒ. ಕಚೇರಿಗೆ ಬಿಲ್‌ಗಳನ್ನು ನೀಡಿ ಪಾಸ್ ಮಾಡುವುದಕ್ಕೆ ಅನುಸರಿಸಿ ಈ ಅಕೌಂಟ್‌ಗಳಿಗೆ ಮೊತ್ತ ಲಭಿಸಲಿದೆ. ನೂತನ ವ್ಯವಸ್ಥೆ ಅರಿತುಕೊಳ್ಳಲು ಡಾಟಾ ಎಂಟ್ರಿ ಆಪರೇಟರ್, ಸೆಕ್ಷನ್ ಕ್ಲರ್ಕ್‌ಗಳಿಗೆ ಕಲ್ಲಿಕೋಟೆಯಲ್ಲಿ ತರಬೇತಿ ನೀಡಲಾಗುವುದು. ಪ್ರತಿ ಶಾಲೆಯ ಸಮಗ್ರ ವಿವರಗಳನ್ನು ನೂತನ ವ್ಯವಸ್ಥೆಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆ ನಡೆ ಯುತ್ತಿದೆ. ಮಧ್ಯಾಹ್ನದೂಟಕ್ಕೆ ಅಗತ್ಯದ ಮೊತ್ತವನ್ನು ಕಂಟಿಂಜೆನ್ಸಿ ಫಂಡ್ ಆಗಿ ಜಿಲ್ಲೆಗೆ 10 ಕೋಟಿ ರೂಪಾಯಿ ಟ್ರೆಶರಿ ಅಕೌಂಟ್‌ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಜೂರು ಮಾಡಿದೆ. ಪ್ರಸ್ತುತ ಇರುವ ಹಣಕಾಸು ಸಮಸ್ಯೆ ನೂತನ ವ್ಯವಸ್ಥೆಯಲ್ಲಿನ ಕುಂದುಕೊರತೆಗಳನ್ನು ನೀಗಿಸಿ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. 1.47 ಕೋಟಿ ವೆಚ್ಚ
ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಶಾಲೆ ತರಗತಿಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದೂಟ ನೀಡಲಾಗುತ್ತಿದೆ. ಇದಕ್ಕಾಗಿ ತಿಂಗಳಿಗೆ ಒಟ್ಟು 1.47 ಕೋ.ರೂ. ಅಗತ್ಯವಿದೆ.